ಕೆಣಕಬೇಡಿ ಕ್ರಿಕೆಟ್ ಮಾಫಿಯಾ ಬಹಿರಂಗ ಪಡಿಸುತ್ತೇನೆ: ಕ್ರಿಕೆಟಿಗನ ಎಚ್ಚರಿಕೆ

ಕೆಣಕಬೇಡಿ ಕ್ರಿಕೆಟ್ ವಲಯದ ಮಾಫಿಯಾವನ್ನು ಬಹಿರಂಗ ಪಡಿಸುತ್ತೇನೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗ ಎಚ್ಚರಿಕೆ ನೀಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಕೆಣಕಬೇಡಿ ಕ್ರಿಕೆಟ್ ವಲಯದ ಮಾಫಿಯಾವನ್ನು ಬಹಿರಂಗ ಪಡಿಸುತ್ತೇನೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗ ಎಚ್ಚರಿಕೆ ನೀಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಹೌದು ಇಂತಹ ಗಂಭೀರ ಎಚ್ಚರಿಕೆ ನೀಡಿರುವುದು ಬೇರಾರೂ ಅಲ್ಲ ಆಫ್ಘಾನಿಸ್ತಾನದ ಪ್ರಮುಖ ಸ್ಟಾರ್ ಆಟಗಾರ ಗುಲ್ಬುದ್ದೀನ್‌ ನೈಬ್‌. ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ಜರುಗಿದ್ದ 2019 ರ ವಿಶ್ವಕಪ್‌ ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಮುನ್ನಡೆಸಿದ್ದ ಗುಲ್ಬುದ್ದೀನ್‌ ನೈಬ್‌, ತಂಡದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್‌ನಲ್ಲಿ ಭಾಗಿಯಾಗಿರುವ 'ಮಾಫಿಯಾ ವಲಯ'ವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತಂತೆ ಬರೆದುಕೊಂಡಿರುವ ಅವರು, 'ನನ್ನ ಪ್ರಿಯ ಆಫ್ಘನ್ನರೇ.. ನಾನು ಸಾರ್ವಜನಿಕವಾಗಿ ಹೋಗಲು ಮುಖ್ಯ ಕಾರಣವೆಂದರೆ, ಒಬ್ಬ ಆಟಗಾರ ಅಥವಾ ಮಂಡಳಿಯ ವಿರುದ್ಧ ನನಗೆ ವೈಯಕ್ತಿಕ ದ್ವೇಷವಿದೆ. ನಮ್ಮ ರಾಷ್ಟ್ರೀಯ ಕ್ರಿಕೆಟ್ ಮತ್ತು ಭ್ರಷ್ಟಾಚಾರ ಹಾಗೂ ಇತರ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ನಾನು ಬಹಿರಂಗಪಡಿಸಲಿದ್ದೇನೆ' ಎಂದು ನೈಬ್ ಗುರುವಾರ ಟ್ವೀಟ್ ಮಾಡಿದ್ದಾರೆ.

ನೈಬ್ ಅವರ ಟ್ವೀಟ್ ಇದೀಗ ಆಫ್ಘನ್ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ನೈಬ್ ಹೇಳಿಕೆ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com