2020ರ ಐಪಿಎಲ್ ಹರಾಜು: ಆಟಗಾರರ ಅಂತಿಮ ಪಟ್ಟಿ ಬಿಡುಗಡೆ, ಉತ್ತಪ್ಪಗೆ 1.5 ಕೋಟಿ ರೂ. ಮೂಲ ಬೆಲೆ

ಮುಂದಿನ ವರ್ಷ ನಡೆಯುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಹರಾಜು ಪ್ರಕ್ರಿಯೆ ಇದೇ 19 ರಂದು ಕೋಲ್ಕತಾದಲ್ಲಿ ನಡೆಯಲಿದೆ. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 332 ಆಟಗಾರರು ಒಳಗೊಂಡಿದ್ದಾರೆ.
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ

ಮುಂಬೈ : ಮುಂದಿನ ವರ್ಷ ನಡೆಯುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಹರಾಜು ಪ್ರಕ್ರಿಯೆ ಇದೇ 19 ರಂದು ಕೋಲ್ಕತಾದಲ್ಲಿ ನಡೆಯಲಿದೆ. ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 332 ಆಟಗಾರರು ಒಳಗೊಂಡಿದ್ದಾರೆ.
  
ಎಂಟು ಫ್ರಾಂಚೈಸಿಗಳು ತನ್ನ ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಈ ಬಾರಿಯ ಹರಾಜು ಪ್ರಕ್ರಿಯೆಗೆ ಒಟ್ಟು 997 ಆಟಗಾರರ ಹಸರು ನೋಂದಣೆಯಾಗಿತ್ತು. ಆದರೆ, ಹರಾಜು ಪ್ರಕ್ರಿಯೆಗೆ ಅಂತಿಮವಾಗಿ 332 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
  
 ಪ್ಯಾಟ್‌ ಕಮಿನ್ಸ್‌, ಜೋಶ್‌ ಹೇಜಲ್‌ವುಡ್‌, ಕ್ರಿಸ್ ಲೀನ್‌, ಮಿಚೆಲ್‌ ಮಾರ್ಷ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಡೇಲ್‌ ಸ್ಟೇಯ್ನ್‌ ಹಾಗೂ ಏಂಜೆಲೊ ಮ್ಯಾಥ್ಯೂಸ್‌  ಸಾಗರೋತ್ತರ ಆಟಗಾರರಾಗಿ ಮೂಲ ಬೆಲೆ 2 ಕೋಟಿ ರೂ. ನಿಗದಿ ಪಡಿಸಲಾಗಿದೆ.
  
ದೇಶ ಪ್ರತಿನಿಧಿಸುರುವ ಆಟಗಾರರ ಮೂಲ ಬೆಲೆಯ ಪಟ್ಟಿ
  
ಮೂಲ ಬೆಲೆ        ಒಟ್ಟು          ಭಾರತೀಯರು              ಸಾಗರೋತ್ತರರು
  
೨ ಕೋಟಿ ರೂ.        7                -                               7
  
೧.೫ ಕೋಟಿ ರೂ.   10              1                             9
  
೧ ಕೋಟಿ ರೂ.     23               3                           20
  
೭೫ ಲಕ್ಷ ರೂ.    16                 -                         16
  
೫೦ ಲಕ್ಷ ರೂ.    78                9                          69
  
ರಾಬಿನ್‌ ಉತ್ತಪ್ಪ 1.5 ಕೋಟಿ ರೂ. ಮೂಲ ಬೆಲೆ ಪಡೆದ ಭಾರತದ ಏಕೈಕ ಆಟಗಾರ. ಪಿಯೂಷ್ ಚಾವ್ಲಾ, ಯೂಸಫ್ ಪಠಾಣ್‌ ಹಾಗೂ ಜಯದೇವ್‌ ಉನದ್ಕತ್‌ ಅವರ ಮೂಲ ಬೆಲೆ 1 ಕೋಟಿ ರೂ.  ನಿಗದಿಯಾಗಿದೆ.

ರಾಷ್ಟ್ರೀಯ ತಂಡ ಪ್ರತಿನಿಧಿಸದ ಆಟಗಾರರ ಮೂಲ ಬೆಲೆ ಪಟ್ಟಿ
  
ಮೂಲ ಬೆಲೆ     ಒಟ್ಟು       ಭಾರತೀಯರು  ಸಾಗರೋತ್ತರರು
  
೪೦ ಲಕ್ಷ ರೂ.   7                    1              6
  
೩೦ ಲಕ್ಷ ರೂ.   8                     5               3
  
೨೦ ಲಕ್ಷ ರೂ.   183              167             16
  
ಭಾರತದಿಂದ ಒಟ್ಟು 186 ಆಟಗಾರರು ಹಾಗೂ 143 ಸಾಗರೋತ್ತರ ಆಟಗಾರರು ಜತೆಗೆ ಮೂರು ಅಸೋಸಿಯೇಟ್‌ ರಾಷ್ಟ್ರಗಳ ಮೂವರು ಆಟಗಾರರು ಹರಾಜಿನಲ್ಲಿ ಇರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com