ವಿಕೆಟ್ ಪಡೆಯೋದೆ ಮುಖ್ಯ ಅಲ್ಲ, ಗಾಯಗೊಂಡಿದ್ದ ಬ್ಯಾಟ್ಸ್‌‌ಮನ್‌‌ನನ್ನು ರನೌಟ್ ಮಾಡದ ಬೌಲರ್, ವಿಡಿಯೋ ವೈರಲ್!

ಕ್ರಿಕೆಟ್ ನಲ್ಲಿ ವಿಕೆಟ್ ಪಡೆಯೋದೆ ಬೌಲರ್ ಗೆ ಮುಖ್ಯವಾಗಿರುತ್ತದೆ. ಆದರೆ ಚೆಂಡು ಬಿದ್ದು ಗಾಯಗೊಂಡು ಪಿಚ್ ನಲ್ಲಿ ಬಿದ್ದಿದ್ದ ಬ್ಯಾಟ್ಸ್‌‌ಮನ್‌‌ನನ್ನು ರನೌಟ್ ಮಾಡದೆ ಬೌಲರ್ ಕ್ರೀಡಾಸ್ಫೂರ್ತಿ ಮೆರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇಸುರು ಉದಾನ
ಇಸುರು ಉದಾನ

ಪಾರ್ಲ್(ದಕ್ಷಿಣ ಆಫ್ರಿಕಾ): ಕ್ರಿಕೆಟ್ ನಲ್ಲಿ ವಿಕೆಟ್ ಪಡೆಯೋದೆ ಬೌಲರ್ ಗೆ ಮುಖ್ಯವಾಗಿರುತ್ತದೆ. ಆದರೆ ಚೆಂಡು ಬಿದ್ದು ಗಾಯಗೊಂಡು ಪಿಚ್ ನಲ್ಲಿ ಬಿದ್ದಿದ್ದ ಬ್ಯಾಟ್ಸ್‌‌ಮನ್‌‌ನನ್ನು ರನೌಟ್ ಮಾಡದೆ ಬೌಲರ್ ಕ್ರೀಡಾಸ್ಫೂರ್ತಿ ಮೆರೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ದಕ್ಷಿಣ ಆಫ್ರಿಕಾ ಟಿ20 ಟೂರ್ನಿ ಎಂಝಾಂಸಿ ಸೂಪರ್ ಲೀಗ್(ಎಂಎಸ್ಎಲ್)ನ ಪಾರ್ಲ್ ರಾಕ್ಸ್ ಹಾಗೂ ನೆಲ್ಸನ್ ಮಂಡೇಲಾ ಬೇ ಜೇಂಟ್ಸ್ ತಂಡಗಳ ನಡುವೆ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದೆ. 

ಬೇ ಜೇಂಟ್ಸ್ ತಂಡದ ಬ್ಯಾಟ್ಸ್ ಮನ್ ಹೆಯ್ನೋ ಕುಹ್ನ್ ಸ್ಟ್ರೈಕ್ ಮತ್ತು ಮಾರ್ಕೊ ಮಾರಿಯಸ್ ನಾನ್ ಸ್ಟ್ರೈಕ್ ನಲ್ಲಿ ಆಡುತ್ತಿದ್ದರು. ಇಸುರು ಉದಾನ ಎಸೆದ 19ನೇ ಓವರ್ ನ 5ನೇ ಎಸೆತದಲ್ಲಿ ಕುಹ್ನ್ ಬಿರುಸಾಗಿ ಹೊಡೆದರು. ಈ ವೇಳೆ ಚೆಂಡು ನಾನ್ ಸ್ಟ್ರೈಕ್ ನಲ್ಲಿದ್ದ ಮಾರ್ಕೊ ಅವರ ಕೈಗೆ ಬಡಿದು ಬೌಲರ್ ಕೈ ಸೇರಿತ್ತು. ಈ ವೇಳೆ ರನ್ ಪಡೆಯಲು ಕ್ರೀಸ್ ಬಿಟ್ಟು ಮುಂದೆ ಬಂದಿದ್ದ ಮಾರ್ಕೊ ಅವರು ಅಲ್ಲೇ ಕುಸಿದು ಬಿದ್ದಿದ್ದರು. 

ಆಗ ಉದಾನ ಅವರಿಗೆ ರನೌಟ್ ಮಾಡುವ ಅವಕಾಶವಿತ್ತು. ಆದರೆ ಬ್ಯಾಟ್ಸ್ ಮನ್ ಪರಿಸ್ಥಿತಿ ನೋಡಿದ ಬೌಲರ್ ರನೌಟ್ ಮಾಡದೆ ಅವರ ನೆರವಿಗೆ ಧಾವಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com