ರಣಜಿ ಟ್ರೋಫಿ: ಗೌತಮ್ ಬೌಲಿಂಗ್ ಮ್ಯಾಜಿಕ್, ಕರ್ನಾಟಕಕ್ಕೆ 26 ರನ್ ಗೆಲುವು

ದಿಂಡಿಗಲ್‌ನಲ್ಲಿ ಗುರುವಾರ ನಡೆದ ಆರಂಭಿಕ ರಣಜಿ ಟ್ರೋಫಿ ಗ್ರೂಪ್ 'ಬಿ' ಪಂದ್ಯದ ನಾಲ್ಕನೇ ದಿನ ತಮಿಳುನಾಡಿನ ವಿರುದ್ಧ  ಕರ್ನಾಟಕ 26 ರನ್‌ಗಳಿಂದ ಜಯಗಳಿಸಿದೆ. ಆಫ್ ಸ್ಪಿನ್ನರ್ ಕೆ ಗೌತಮ್ ಅವರ ಎಂಟು ವಿಕೆಟ್ ಗಳಿಕೆ ರಾಜ್ಯದ ಗೆಲುವಿಗ ಬಹುಮಟ್ಟಿಗೆ ನೆರವು ನೀಡಿದೆ.
ರಣಜಿ ಟ್ರೋಫಿ: ಗೌತಮ್ ಬೌಲಿಂಗ್ ಮ್ಯಾಜಿಕ್, ಕರ್ನಾಟಕಕ್ಕೆ 26 ರನ್ ಗೆಲುವು
ರಣಜಿ ಟ್ರೋಫಿ: ಗೌತಮ್ ಬೌಲಿಂಗ್ ಮ್ಯಾಜಿಕ್, ಕರ್ನಾಟಕಕ್ಕೆ 26 ರನ್ ಗೆಲುವು

ದಿಂಡಿಗಲ್: ದಿಂಡಿಗಲ್‌ನಲ್ಲಿ ಗುರುವಾರ ನಡೆದ ಆರಂಭಿಕ ರಣಜಿ ಟ್ರೋಫಿ ಗ್ರೂಪ್ 'ಬಿ' ಪಂದ್ಯದ ನಾಲ್ಕನೇ ದಿನ ತಮಿಳುನಾಡಿನ ವಿರುದ್ಧ  ಕರ್ನಾಟಕ 26 ರನ್‌ಗಳಿಂದ ಜಯಗಳಿಸಿದೆ. ಆಫ್ ಸ್ಪಿನ್ನರ್ ಕೆ ಗೌತಮ್ ಅವರ ಎಂಟು ವಿಕೆಟ್ ಗಳಿಕೆ ರಾಜ್ಯದ ಗೆಲುವಿಗ ಬಹುಮಟ್ಟಿಗೆ ನೆರವು ನೀಡಿದೆ.

ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ನಂತರ ಗೆಲುವಿಗೆ 181 ರನ್ ಅಗತ್ಯವಿತ್ತು. ಅತಿಥೇಯ ತಂಡ ತಮಿಳುನಾಡು ಎರಡನೇ ಇನ್ನಿಂಗ್ಸ್‌ನಲ್ಲಿ 154 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮುನ್ನ ಕರ್ನಾಟಕ ತನ್ನ ದ್ವಿತೀಯ ಸರದಿಯಲ್ಲಿ 151ಕ್ಕೆ ಆಲೌಟ್‌ ಆಗಿತ್ತು.

ಪ<ದ್ಯದ ಕಡೇ ಎರಡು ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ನಡೆಸಿದ್ದ ಗೌತಮ್‌ ತಮಿಳುನಾಡು ತಂಡದ ಕಡೆಯ ಎರಡು ವಿಕೆಟ್ ಕಿತ್ತು ಕರ್ನಾಟಕಕ್ಕೆ ಜಯ ಖಾತ್ರಿಪಡಿಸಿದ್ದರು.ಇದಲ್ಲದೆ ಗೌತಮ್ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಬಳಿಸಿದ್ದರು. ಹೀಗೆ ಒಂದೇ ಪಂದ್ಯದಲ್ಲಿ 60ಕ್ಕೆ 8  ವಿಕೆಟ್ ಪಡೆದು ಸಾಧನೆ ಮಾಡಿದ್ದರು. 170ಕ್ಕೆ 14 ವಿಕೆಟ್‌.ಪಡೆಇದ್ದಲ್ಲದೆ ಬ್ಯಾಟಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅರ್ಹತೆಯ ಆಧಾರದ ಮೇಲೆ ಪಂದ್ಯಶ್ರೇಷ್ಠ ಪ್ರಶಸ್ತಿ ಅವರದಾಗಿತ್ತು.

ಇನ್ನು ಕರ್ನಾಟಕದ ಈ ಗೆಲುವಿನೊಡನೆ ಕರುಣ್ ನಾಯರ್ ನಾಯಕತ್ವದ ತಂಡ 2019-20ನೇ ಸಾಲಿನ ರಣಜಿ ಋತುವನ್ನು ಶುಭಾರಂಭ ಮಾಡಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com