'ಧೋನಿ ಟಿ-20 ವಿಶ್ವಕಪ್' ಟೂರ್ನಿಯಲ್ಲಿ ಆಡ್ತಾರೆ- ಡ್ವೇನ್ ಬ್ರಾವೋ

ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಟಿ-20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ  ಹೇಳಿದ್ದಾರೆ. 
ಡ್ವೇನ್ ಬ್ರಾವೋ , ಧೋನಿ
ಡ್ವೇನ್ ಬ್ರಾವೋ , ಧೋನಿ

ಮುಂಬೈ: ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಟಿ-20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ  ಹೇಳಿದ್ದಾರೆ. 

ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್  ಪಂದ್ಯಾವಳಿಯ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಧೋನಿ ಎಲ್ಲಿಯೂ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿಲ್ಲ, 2020ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಭಾಗವಾಗಲಿದ್ದಾರೆ ಎಂದು ಹಲವು ವರ್ಷಗಳಿಂದ ಐಪಿಎಲ್ ನಲ್ಲಿ ಧೋನಿ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ಬ್ರಾವೋ ಹೇಳಿಕೊಂಡಿದ್ದಾರೆ.

ಧೋನಿ ಯಾವತ್ತೂ ನಿವೃತ್ತಿಯಾಗಲ್ಲ, ಅವರು  ಎಂದಿಗೂ ಕ್ರಿಕೆಟ್ ಹೊರಗಿನ ವಿಷಯಗಳನ್ನು ತನ್ನ ಮೇಲೆ ಪ್ರಭಾವ ಬೀರಲು ಬಿಡುತ್ತಿರಲಿಲ್ಲ. ನಮಗೂ ಕೂಡಾ ಅದನ್ನೇ ಕಲಿಸಿದ್ದಾರೆ. ಎಂದಿಗೂ ಭಯಪಡಬೇಡಿ, ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ ಎಂದು ಹೇಳುತ್ತಿದ್ದಾಗಿ ಡ್ವೇನ್ ಬ್ರಾವೋ  ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಈ ಮಧ್ಯೆ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಾಪಾಸ್ ಆಗುವುದಾಗಿ ಬ್ರಾವೋ ತಿಳಿಸಿದ್ದಾರೆ, 2018ರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬ್ರಾವೋ ನಿವೃತ್ತಿ ಘೋಷಿಸಿದ್ದರು. ಮೈದಾನದಲ್ಲಿನ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ. ಆದರೆ, ಮೈದಾನದ ಹೊರಗಿನ ಹಾಗೂ ಒಳಗಿನ ನಾಯಕರು ಬದಲಾವಣೆಯಾದ್ದಲ್ಲಿ ಮತ್ತೆ ಆಡುವುದಾಗಿ ಬ್ರಾವೋ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com