ಅಂಪೈರ್ ಜೀವದಾನ ಕೊಟ್ಟಿದ್ದರು ನಂತರ ಜಡೇಜಾ ರನೌಟ್ ಗೆ ಬಲಿಯಾಗಿದ್ದೇಕೆ? ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದ್ದು ಈ ಮಧ್ಯೆ ಮೈದಾನದ ಅಂಪೈರ್ ಎಡವಟ್ಟು ಒಂದನ್ನು ಮಾಡಿದ್ದರು. ಇದು ರವೀಂದ್ರ ಜಡೇಜಾಗೆ ಜೀವದಾನ ನೀಡಿತ್ತು.
ರನೌಟ್ ದೃಶ್ಯ
ರನೌಟ್ ದೃಶ್ಯ

ಚೆನ್ನೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದ್ದು ಈ ಮಧ್ಯೆ ಮೈದಾನದ ಅಂಪೈರ್ ಎಡವಟ್ಟು ಒಂದನ್ನು ಮಾಡಿದ್ದರು. ಇದು ರವೀಂದ್ರ ಜಡೇಜಾಗೆ ಜೀವದಾನ ನೀಡಿತ್ತು.

ಅದು 48ನೇ ಓವರ್. ಕೆಮೋ ಪೌಲ್ ಬೌಲಿಂಗ್ ಮಾಡಿದ್ದು ಸ್ಟ್ರೈಕ್ ನಲ್ಲಿದ್ದ ಜಡೇಜಾ ಬಿರುಸಿನ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ಫೀಲ್ಡರ್ ಕೈಸೇರಿತ್ತು. ಈ ವೇಳೆ ಸಿಂಗಲ್ ತೆಗೆದುಕೊಳ್ಳಲು ಓಡಿದರು. ಫೀಲ್ಡರ್ ಚೆಂಡನ್ನು ನಾನ್ ಸ್ಟ್ರೈಕ್ ನ ವಿಕೆಟ್ ಗೆ ಹೊಡೆದರು. 

ಇನ್ನು ಅಂಪೈರ್ ಜಡೇಜಾ ಚೆಂಡು ವಿಕೆಟ್ ಗೆ ಬಡಿಯುವುದಕ್ಕೂ ಮುನ್ನ ಕ್ರೀಸ್ ಗೆ ಬಂದಿದ್ದಾರೆ ಎಂದು ಭಾವಿಸಿ ಸುಮ್ಮನಿದ್ದರು. ಇನ್ನು ಫೀಲ್ಡರ್ ಗಳ ಸಹ ಪರಿಣಾಮಕಾರಿ ರನೌಟ್ ಅಪೀಲ್ ಮಾಡಲಿಲ್ಲ. ಇದರಿಂದ ಮೈದಾನದ ಅಂಪೈರ್ ಸಹ ಸುಮ್ಮನಾಗಿದ್ದರು. ಕೆಲ ಹೊತ್ತಿನ ನಂತರ ಮೈದಾನದ ಅಂಪೈರ್ ಮೂರನೇ ಅಂಪೈರ್ ಮನವಿ ಮಾಡಿದ ನಂತರ ರನೌಟ್ ಪರಿಶೀಲನೆ ಮಾಡಿದ ಮೂರನೇ ಅಂಪೈರ್ ರನೌಟ್ ಆಗಿರುವುದಾಗಿ ಮೈದಾನದ ಅಂಪೈರ್ ಗೆ ಸೂಚಿಸಿದ್ದರಿಂದ ಜಡೇಜಾ ರನೌಟ್ ಆಗಿ ಪೆವಿಲಿಯನ್ ಸೇರಬೇಕಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com