ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ರೊನಾಲ್ಡೋ ಇದ್ದಹಾಗೆ: ಬ್ರಿಯಾನ್ ಲಾರಾ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್.. ಫುಟ್ ಬಾಲ್ ನಲ್ಲಿ ಹೇಗೆ ಕ್ರಿಸ್ಟಿಯಾನೋ ರೊನಾಲ್ಡೋ ಇದ್ದಾರೆಯೋ ಹಾಗೆ ಕೊಹ್ಲಿ ಕೂಡ ಕ್ರಿಕೆಟ್ ನ ರೊನಾಲ್ಡೋ ಎಂದು ಬಣ್ಣಿಸಿದ್ದಾರೆ.

Published: 16th December 2019 04:03 PM  |   Last Updated: 16th December 2019 04:05 PM   |  A+A-


Brian Lara calls Virat Kohli the Cristiano Ronaldo of cricket

ಲಾರಾ ಮತ್ತು ವಿರಾಟ್ ಕೊಹ್ಲಿ

Posted By : Srinivasamurthy VN
Source : PTI

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್.. ಫುಟ್ ಬಾಲ್ ನಲ್ಲಿ ಹೇಗೆ ಕ್ರಿಸ್ಟಿಯಾನೋ ರೊನಾಲ್ಡೋ ಇದ್ದಾರೆಯೋ ಹಾಗೆ ಕೊಹ್ಲಿ ಕೂಡ ಕ್ರಿಕೆಟ್ ನ ರೊನಾಲ್ಡೋ ಎಂದು ಬಣ್ಣಿಸಿದ್ದಾರೆ.

ಕ್ರೀಡಾ ಕಾರ್ಯಕ್ರಮದಲ್ಲಿ ಸುದ್ದಿಸಂಸ್ಥೊಂದಿಗೆ ಮಾತನಾಡಿದ ಲಾರಾ, ಫುಟ್ಬಾಲ್ ಕುರಿತಂತೆ ಕ್ರಿಸ್ಟಿಯಾನೋ ರೊನಾಲ್ಡೋಗೆ ಇರುವ ಬದ್ಧತೆ, ಕ್ರಿಕೆಟ್ ನಲ್ಲಿ ನಾನು ಕೊಹ್ಲಿಯಲ್ಲಿ ಕಂಡಿದ್ದೇನೆ. ಅದೇ ರೀತಿ ಆಟದ ಕುರಿತಂತೆ ಕೆಎಲ್ ರಾಹುಲ್ ಗಿರುವ ಬದ್ಧತೆ ಕೂಡ ಮೆಚ್ಚುವಂತಹುದ್ದೇ ಎಂದು ಹೇಳಿದ್ದಾರೆ.

'ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಅನ್ನು ಮುಂದಿನ ಹಂತಕ್ಕೆ ಕೊಂಡು ಒಯ್ದ ಶ್ರೇಯಸ್ಸು ಸಚಿನ್ ಬಳಿಕ ಕೊಹ್ಲಿಗೆ ಸಲ್ಲುತ್ತದೆ. ರಾಹುಲ್, ರೋಹಿತ್ ಶರ್ಮಾ ಅವರಿಗಿರುವ ಬ್ಯಾಟಿಂಗ್ ಕೌಶಲ್ಯಗಳಿಗಿಂತ ಮಿಗಿಲಾದ ಅಥವ ಉನ್ನತ ಕೌಶಲ್ಯ ಕೊಹ್ಲಿಗೆ ಇದೆ ಎಂದು ನಾನು ಹೇಳುತ್ತಿಲ್ಲ. ಆದರೆ ಕ್ರಿಕೆಟ್ ಕುರಿತಂತೆ ಆತನಿಗಿರುವ ಬದ್ಧತೆ ಎಲ್ಲರೂ ಮೆಚ್ಚುವಂತಹದ್ದು. ನನ್ನ ಪಾಲಿಗೆ ಆತ ಕ್ರಿಕೆಟ್ ಲೋಕದ ಕ್ರಿಸ್ಟಿಯಾನೋ ರೊನಾಲ್ಡೋ. ಆತನ ಬ್ಯಾಟಿಂಗ್ ಕೌಶಲ್ಯ ಅತ್ಯುತ್ತಮವಾಗಿದೆ. 70 ದಶಕದಲ್ಲಿ ಕ್ಲೈವ್ ಲಾಯ್ಡ್ ಇದ್ದಹಾಗೆ 2020ರ ದಶಕದಲ್ಲಿ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗೂ ಒಗ್ಗುತ್ತಾರೆ ಎಂದು ಲಾರಾ ಮೆಚ್ಚುದೆ ವ್ಯಕ್ತಪಡಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp