ವಿರಾಟ್ ಕೊಹ್ಲಿ ಈಸ್ ಲೆಜೆಂಡ್...ನನ್ನನ್ನು ಅವರಿಗೆ ಹೋಲಿಸಬೇಡಿ; ಪಾಕ್ ಕ್ರಿಕೆಟಿಗ ಬಾಬರ್ ಅಜಮ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೆಜೆಂಡ್ ಅಟಗಾರರಾಗಿದ್ದು, ಅವರಿಗೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನದ ಉದಯೋನ್ಮುಖ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೆಜೆಂಡ್ ಅಟಗಾರರಾಗಿದ್ದು, ಅವರಿಗೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನದ ಉದಯೋನ್ಮುಖ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಬಾಬರ್ ಅಜಮ್ ರನ್ನು ಹಲವರು ಹೋಲಿಸುತ್ತಿದ್ದಾರೆ. ಇದನ್ನು ಸದಾ ವಿರೋಧಿಸುತ್ತಾ ಬಂದಿರುವ ಬಾಬರ್ ಮತ್ತೊಮ್ಮೆ ಕೊಹ್ಲಿಯೊಂದಿಗೆ ತಮ್ಮನ್ನು ಹೋಲಿಸಿರುವುದಕ್ಕೆ ಪ್ರತಿಕ್ರಿಯಿಸಿದ್ದಾರೆ. 

'ನಾನು ಈಗ ಯಾರಿಗೂ ಹೋಲಿಕೆಯಲ್ಲ. ನನ್ನ ಆಟ ನನ್ನದು.. ಕೊಹ್ಲಿ ಆಟ ಅವರದ್ದು, ನಾನು ಈಗ ದಿಗ್ಗಜ ಕ್ರಿಕೆಟಿಗರೊಂದಿಗೆ ಹೋಲಿಸಿಕೊಳ್ಳಬಹುದಾದ ಕ್ರಿಕೆಟಿಗನಲ್ಲ. ಕೊಹ್ಲಿ ಲೆಜೆಂಡ್, ಕೊಹ್ಲಿ ಭಾರತ ತಂಡದ ಅಪ್ರತಿಮ ಕ್ರಿಕೆಟಿಗ. ನನ್ನನ್ನು ಕೊಹ್ಲಿಅಥವಾ ಸ್ಟೀವ್ ಸ್ಮಿತ್‌ಗೆ ಹೋಲಿಸಬೇಡಿ. ಅದು ನನ್ನ ಮೇಲೆ ಯಾವುದೇ ಒತ್ತಡ ಬೀರುವುದಿಲ್ಲ. ಆದರೆ, ಅವರಿಬ್ಬರೂ ಸಮಕಾಲೀನ ಕ್ರಿಕೆಟ್‌ನಲ್ಲಿ ಮೇರು ಕ್ರಿಕೆಟಿಗರು. ಕೊಹ್ಲಿಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು  ಬಾಬರ್ ಹೇಳಿದರು.

ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.  ಹಾಗಾಗಿ ನನ್ನನ್ನು ಅವರಿಗೆ ಹೋಲಿಸಿದರೆ ಹೇಗೆ..? ಎಂದು ಪ್ರಶ್ನಿಸಿರುವ ಬಾಬರ್, ಈಗ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ... ನಾನು  ಅವರಂತೆಯೇ      ಆಗಬೇಕು ಎಂದು ಬಯಸುತ್ತೇನೆ. ಮಾಧ್ಯಮಗಳು ಮತ್ತು ಅಭಿಮಾನಿಗಳು ನಮ್ಮಿಬ್ಬರ ನಡುವೆ ಹೋಲಿಕೆ ಮಾಡುತ್ತಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ನಾನು ಇನ್ನೂ ಸಾಕಷ್ಟು ರನ್ ಗಳನ್ನು ಕಲೆಹಾಕಬೇಕು. ಆಗ್ರ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ವರ್ಷ ಆಡುವತ್ತ ಗಮನ ಹರಿಸಿದ್ದೇನೆ. ನನ್ನ ಬ್ಯಾಟಿಂಗ್ ತಂತ್ರವನ್ನು ಸುಧಾರಿಸುವುದು ಮತ್ತು ಮುಂದುವರಿಯುವುದು ನನ್ನ ಗುರಿ. ಆ ಕಾರಣಕ್ಕಾಗಿ, ನಾನು ನನ್ನಇನ್ನಿಂಗ್ಸ್‌ನ ವೀಡಿಯೊಗಳನ್ನು ನೋಡಿ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ನನ್ನ ತಪ್ಪುಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿ, ಪುನರಾವರ್ತನೆಯಾಗದಂತೆ ಎಚ್ಚರ ವಹಿಸುತ್ತಿದ್ದೇನೆ ಎಂದು ಬಾಬರ್ ಅಜಮ್ ಹೇಳಿದ್ದಾರೆ.
  
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಜಮ್ ಶತಕ ಬಾರಿಸಿದ್ದರು. ಸುಮಾರು ಎರಡು ದಿನಗಳ ನಿರಂತರ ಮಳೆಯ ನಂತರ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಈ ಪಂದ್ಯದಲ್ಲಿ ಶತಕ ಬಾರಿಸಿದ ಅಜಮ್ ಟೆಸ್ಟ್ ಶ್ರೇಯಾಂಕದ ಅಗ್ರ -೧೦ ರಲ್ಲಿ ಪಾದಾರ್ಪಣೆ ಮಾಡಿದರು. ಅಜಮ್ ಪ್ರಸ್ತುತ ೯ ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com