ನಿವೃತ್ತಿಯಿಂದ ಹಿಂದೆ ಸರಿಯುತ್ತಾರಾ ಎಬಿ ಡಿವಿಲಿಯರ್ಸ್? ದಕ್ಷಿಣ ಆಫ್ರಿಕಾ ನಾಯಕ ಹೇಳೋದೇನು?

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮುಂದಿನ ವರ್ಷ ನಡೆಯುವ ಟಿ -20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮುಂದಿನ ವರ್ಷ ನಡೆಯುವ ಟಿ -20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾದ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಖಚಿತಪಡಿಸಿದ್ದಾರೆ. ಇದಕ್ಕಾಗಿ ಡಿವಿಲಿಯರ್ಸ್ ಮಂಡಳಿಯ ಸದಸ್ಯರೊಂದಿಗೆ ಮಾತುಕತೆ ಆರಂಭಿಸಿದ್ದಾರೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ. 

ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಎರಡು ದಿನಗಳ ಹಿಂದೆ ಡಿವಿಲಿಯರ್ಸ್ ಅವರನ್ನು ವಿಶ್ವಕಪ್‌ನಲ್ಲಿ ಆಡಲು ಕೇಳಿಕೊಳ್ಳುವುದಾಗಿ ಹೇಳಿದ್ದರು. ಡಿವಿಲಿಯರ್ಸ್ ಮತ್ತು ಬೌಚರ್ ಈಗಾಗಲೇ ಇದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಡುಪ್ಲೆಸಿಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com