ನಿವೃತ್ತಿ ವದಂತಿ: ಯಾವುದು ಉತ್ತಮ ಎಂಬುದು ಎಂಎಸ್ ಧೋನಿಗೆ ಗೊತ್ತಿದೆ; ಸೌರವ್ ಗಂಗೂಲಿ

ಇಂಗ್ಲೆಂಡ್ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ಜುಲೈ 24 ರಂದು ಮುಕ್ತಾಯವಾಗಿದ್ದ ಐಸಿಸಿ ವಿಶ್ವಕಪ್ ಬಳಿಕ ಭಾರತ ತಂಡದಿಂದ ದೂರ ಉಳಿದಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಭಾರತೀಯ ನಿಯಂತ್ರಣ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಎಂಎಸ್ ಧೋನಿ-ಸೌರವ್ ಗಂಗೂಲಿ
ಎಂಎಸ್ ಧೋನಿ-ಸೌರವ್ ಗಂಗೂಲಿ

ಕೋಲ್ಕತಾ: ಇಂಗ್ಲೆಂಡ್ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ಜುಲೈ 24 ರಂದು ಮುಕ್ತಾಯವಾಗಿದ್ದ ಐಸಿಸಿ ವಿಶ್ವಕಪ್ ಬಳಿಕ ಭಾರತ ತಂಡದಿಂದ ದೂರ ಉಳಿದಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಭಾರತೀಯ ನಿಯಂತ್ರಣ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. 

ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬಂತೆ 2007ರ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಎಂ.ಎಸ್ ಧೋನಿ ಅವರಿಗೆ ಗೊತ್ತಿದೆ. ಕ್ರಿಕೆಟ್ ವೃತ್ತಿ ಜೀವನದ ನಿವೃತ್ತಿ ನಿರ್ಧಾರ ಅವರಿಗೆ ಸ್ವಾತಂತ್ರವಾಗಿ ಬಿಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಬಗ್ಗೆ  ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಕೇಂದ್ರ ಸರ್ಕಾರದ ನಿರ್ಧಾರವಾಗಿದೆ. ಪಾಕಿಸ್ತಾನದ ವಿರುದ್ಧ ಆಡುವುದು ಸರ್ಕಾರದ ಮೇಲೆ ಅವಲಂಬನೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಗುರುವಾರ ಕೋಲ್ಕತಾದಲ್ಲಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ 62 ಆಟಗಾರರು ಎಂಟೂ ಫ್ರಾಾಂಚೈಸಿಗಳ ಪಾಲಾಗಿದ್ದಾರೆ. 15.50 ಕೋಟಿ ರೂ. ಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾದ ಪ್ಯಾಟ್ ಕಮಿನ್ಸ್‌ ಅತ್ಯಂತ ದುಬಾರಿ ವಿದೇಶಿ ಆಟಗಾರರಾದರು. 6.75 ಕೋಟಿ ರೂ.ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್‌ ಪಾಲಾದ ಪಿಯೂಷ್ ಚಾವ್ಲಾ ಭಾರತದ ಅತ್ಯಂದ ದುಬಾರಿ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

ಹಿರಿಯ ಅಥವಾ ಕಿರಿಯ ಎಂಬ ಯಾವುದೇ ಬೇಧಬಾವ ಇಲ್ಲದೇ ಎಲ್ಲಾ ಆಟಗಾರರಿಗೂ ಸಮನ ವೇದಿಕೆ ಕಲ್ಪಿಸಲಾಗಿದೆ. ವಿಶ್ವದ ಅತಿ ದೊಡ್ಡ ಟೂರ್ನಿಯಾಗಿರುವ ಐಪಿಎಲ್‌ಎ ಎಲ್ಲ ಪಂದ್ಯಗಳನ್ನು ಎಲ್ಲ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ ಎಂದು ಗಂಗೂಲಿ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com