ರಣಜಿ ಟ್ರೋಫಿ: ಶೌಕತ್ ಶತಕ, ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ

ಇಲ್ಲಿನ ರಾಜನಗರದ ಕೆಎಸ್ ಸಿಎ ಅಂಗಳದಲ್ಲಿ ನಡೆದೆ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ನಿರೀಕ್ಷೆಯಂತೆ ಡ್ರಾ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ ತಂಡಕ್ಕೆ ಮೂರು ಹಾಗೂ ಉತ್ತರ ಪ್ರದೇಶ ತಂಡಕ್ಕೆ ಒಂದು ಅಂಕ ಲಭಿಸಿದೆ.
ರಣಜಿ ಟ್ರೋಫಿ: ಶೌಕತ್ ಶತಕ, ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ
ರಣಜಿ ಟ್ರೋಫಿ: ಶೌಕತ್ ಶತಕ, ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ ಸಿಎ ಅಂಗಳದಲ್ಲಿ ನಡೆದೆ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ನಿರೀಕ್ಷೆಯಂತೆ ಡ್ರಾ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ ತಂಡಕ್ಕೆ ಮೂರು ಹಾಗೂ ಉತ್ತರ ಪ್ರದೇಶ ತಂಡಕ್ಕೆ ಒಂದು ಅಂಕ ಲಭಿಸಿದೆ.

ನಾಲ್ಕನೇ ದಿನವಾದ ಶುಕ್ರವಾರ ಒಂದು ವಿಕೆಟ್ ಗೆ 29 ರನ್ ಗಳಿಂದ ಆಟ ಮುಂದುವರಿಸಿ, 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಮುನ್ನುಗುತ್ತಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಕರ್ನಾಟಕ ಎರಡು ಪಂದ್ಯಗಳಿಂದ ಒಂಬತ್ತು ಅಂಕ ಕಲೆ ಹಾಕಿದೆ. 

ಉತ್ತರ ಪ್ರದೇಶದ ಅಲ್ಮಾಸ್ ಶೌಕತ್ ಶತಕ ಬಾರಿಸುತ್ತಿದ್ದಂತೆ ಪಂದ್ಯ ಡ್ರಾ ಎಂದು ಘೋಷಣೆಯಾಗಿದೆ. ಶೌಕತ್ 210ಎಸೆತಕ್ಕೆ 103ರನ್ ಗಳಿಸಿದ್ದರು. ಮೊಹಮ್ಮದ್ ಸೈಫ್ ೮ ರನ್ ಗಳಿಸಿದ್ದರು. ಪ್ರವಾಸಿ ತಂಡ ದ್ವಿತೀಯ ಇನ್ನಿಂಗ್ಸ್ ನಲ್ಲಿ ೪೬ ಓವರ್ ಗಳಲ್ಲಿ ೨ ವಿಕೆಟ್‌ ಗೆ ೧೩೦ ರನ್ ಗಳಿಸಿತ್ತು.

ಉಭಯ ತಂಡಗಳಿಗೆ ಇದು ಎರಡನೇ ಲೀಗ್ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡಿನ ವಿರುದ್ಧ ಜಯ ಸಾಧಿಸಿದ್ದರೆ ಉತ್ತರ ಪ್ರದೇಶ ರೈಲ್ವೇಸ್ ತಂಡದ ವಿರುದ್ಧ ಡ್ರಾ ಸಾಧಿಸಿಕೊಂಡಿತ್ತು.

ಕರ್ನಾಟಕದ ಅಭಿಮನ್ಯು ಮಿಥುನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com