ಕೋಲ್ಕತ್ತಾ ಆಶ್ರಯ ಮನೆಗಳ ಮಕ್ಕಳಿಗಾಗಿ ಸೀಕ್ರೆಟ್ ಸಾಂಟಾ'ಆದ  ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋಲ್ಕತ್ತಾದ ಆಶ್ರಯ ಮನೆಯಲ್ಲಿನ ಮಕ್ಕಳಿಗೆ ಸಾಂಟಾ ಕ್ಲಾಸ್ ಆಗಿ ಕಾಣಿಸಿಕೊಂಡು ಉಡುಗೊರೆಗಳನ್ನು ನೀಡುವ ಮೂಲಕ ಅಚ್ಚರಿಯುಂಟುಮಾಡಿದ್ದಾರೆ. 

Published: 21st December 2019 03:03 PM  |   Last Updated: 21st December 2019 03:23 PM   |  A+A-


ಕೋಲ್ಕತ್ತಾ ಆಶ್ರಯ ಮನೆಗಳ ಮಕ್ಕಳಿಗಾಗಿ ಸೀಕ್ರೆಟ್ ಸಾಂಟಾ' ಕೊಹ್ಲಿ!

Posted By : Raghavendra Adiga
Source : IANS

ಕೋಲ್ಕತ್ತಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋಲ್ಕತ್ತಾದ ಆಶ್ರಯ ಮನೆಯಲ್ಲಿನ ಮಕ್ಕಳಿಗೆ ಸಾಂಟಾ ಕ್ಲಾಸ್ ಆಗಿ ಕಾಣಿಸಿಕೊಂಡು ಉಡುಗೊರೆಗಳನ್ನು ನೀಡುವ ಮೂಲಕ ಅಚ್ಚರಿಯುಂಟುಮಾಡಿದ್ದಾರೆ. 

ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ವೀಡಿಯೊವೊಂದರಲ್ಲಿ, ಕೊಹ್ಲಿ ಸಾಂಟಾ ಗೆಟ್‌ಅಪ್‌ನಲ್ಲಿ ಇರುವುದನ್ನು ಕಾಣಬಹುದಾಗಿದೆ.  ಕೆಂಪು ಸೂಟ್‌ನಲ್ಲಿ ಗುಂಡಗೆ ಇದ್ದು  ಬಿಳಿ ಗಡ್ಡ ಮತ್ತು ಹುಬ್ಬುಗಳಿಂದ ಅಲಂಕರಿಸಿಕೊಂಡ ಕೊಹ್ಲಿ ಆಶ್ರಯ ಮನೆಗಳಲ್ಲಿದ್ದ ಮಕ್ಕಳನ್ನು ಭೇಟಿಯಾಗಿದ್ದಾರೆ.

ಅಲ್ಲಿ ಅವರು ಮಕ್ಕಳ ಇಚ್ಚೆಯಂತೆ ಉಡುಗೊರೆಗಳನ್ನು ವಿತರಿಸಿದ್ದಾರೆ. "ಸ್ಪೈಡರ್ಮ್ಯಾನ್ ಮತ್ತು ಸೂಪರ್ಮ್ಯಾನ್ ರಜೆಯಲ್ಲಿದ್ದಾರೆ"  ಎನ್ನುವ ಮೂಲಕ ಮಕ್ಕಳನ್ನು ಕೊಹ್ಲಿ ಭೇಟಿಗೆ ಕರೆಯಲಾಗಿತ್ತು. ಆಗ ಮಕ್ಕಳು ಜೋರಾಗಿ "ಹೌದು" ಎಂದು ಕಿರುಚುತ್ತಾ ಉತ್ತರಿಸಿದ್ದಾರೆ. ಆ ನಂತರ ಕೊಹ್ಲಿ ತಮ್ಮ ತಲೆಯ ಕ್ಯಾಪ್ ಹಾಗೂ ಗಡ್ಡಗಳನ್ನು ತೆಗೆದು ನಿಜರೂಪ ಬಹಿರಂಗಪಡಿಸಿದ್ದಾರೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನ ಬಿಡುಗಡೆಯಾದ ಈ ವಿಡಿಯೋ ಸಾಮಾಜಿಕ ಮಾದ್ಯಮಗಳಲ್ಲಿ  ಭಾರಿ ಪ್ರಶಂಸೆಯನ್ನು ಗಳಿಸಿತು, ಮಕ್ಕಳನ್ನು ಭೇಟಿ ಮಾಡಿದ ಕೊಹ್ಲಿ ಉಪಕ್ರಮಕ್ಕೆ ಎಲ್ಲೆಡೆಗಳಿಂದ ಪ್ರಶಂಸೆ ವ್ಬ್ಯಕ್ತವಾಗಿದೆ.

ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.ಇದಾಗಲೇ ನಡೆದ ಎರಡೌ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಭಾನುವಾರ ಕಟಕ್ ನಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp