ಐಪಿಎಲ್‌ನಲ್ಲಿ ಭರ್ಜರಿ ಮೊತ್ತಕ್ಕೆ ಬಿಕರಿಯಾದ ಬೆನ್ನಲ್ಲೇ 2019ರ ಅತ್ಯುತ್ತಮ ಕ್ಯಾಚ್ ಹಿಡಿದ ಜೋರ್ಡನ್, ವಿಡಿಯೋ ವೈರಲ್!

2020 ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಹಾಜರು ಪ್ರಕ್ರಿಯೆ ನಡೆದಿದ್ದು ಇದರಲ್ಲಿ ಇಂಗ್ಲೆಂಡ್ ತಂಡದ ಆಟಗಾಗರ ಕ್ರಿಸ್ ಜೋರ್ಡನ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದರು. ಇದರ ಬೆನ್ನಲ್ಲೇ ಬಿಗ್ ಬ್ಯಾಷ್ ಲೀಗ್ ನಲ್ಲಿ ಅದ್ಭುತ ಕ್ಯಾಚ್ ವೊಂದನ್ನು ಹಿಡಿದಿದ್ದು ಇದು 2019ರ ಅತ್ಯುತ್ತಮ ಕ್ಯಾಚ್ ಆಗಿದೆ.
ಕ್ರಿಸ್ ಜೋರ್ಡನ್

ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಜೋರ್ಡನ್ ಅವರನ್ನು 3 ಕೋಟಿ ರುಪಾಯಿಗೆ ಖರೀದಿಸಿದೆ.

ಪರ್ತ್ ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡದ ಪರ್ತ್ ಸ್ಟಾರ್ಚಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಪಂದ್ಯದಲ್ಲಿ ಜೋರ್ಡನ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.

ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಅವರು ಚೆಂಡನ್ನು ಬಿರುಸಾಗಿ ಹೊಡೆದರು. ಈ ವೇಳೆ ಲಾಂಗ್ ಆನ್ ನಲ್ಲಿ ನಿಂತಿದ್ದ ಜೋರ್ಡನ್ ಓಡಿ ಬಂದು ಡೈವ್ ಮಾಡಿ ಈ ಕ್ಯಾಚ್ ಹಿಡಿದಿದ್ದು ಇದು ಬಿಗ್ ಬ್ಯಾಶ್ ನಲ್ಲಿಯೇ ಅದ್ಭುತ ಹಾಗೂ 2019ರ ಬೆಸ್ಟ್ ಕ್ಯಾಚ್ ಎಂದು ಬಣ್ಣಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com