ಕೋಲಾರದಲ್ಲಿ ಕ್ಯಾಚ್ ಹಿಡಿಯುವ ವೇಳೆ ಆಟಗಾರರಿಬ್ಬರು ಮುಖಾಮುಖಿ ಡಿಕ್ಕಿ, ಕುಸಿದು ಬಿದ್ದ ಫೀಲ್ಡರ್ಸ್!

ಧೋನಿ ಪ್ರೀಮಿಯರ್ ಲೀಗ್(ಡಿಪಿಎಲ್)ನಲ್ಲಿ ಕ್ಯಾಚ್ ಹಿಡಿಯುವ ವೇಳೆ ಇಬ್ಬರು ಆಟಗಾರರು ಮುಖಾಮುಖಿ ಡಿಕ್ಕಿಯಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ಘಟನಾ ದೃಶ್ಯ
ಘಟನಾ ದೃಶ್ಯ

ಕೋಲಾರ: ಧೋನಿ ಪ್ರೀಮಿಯರ್ ಲೀಗ್(ಡಿಪಿಎಲ್)ನಲ್ಲಿ ಕ್ಯಾಚ್ ಹಿಡಿಯುವ ವೇಳೆ ಇಬ್ಬರು ಆಟಗಾರರು ಮುಖಾಮುಖಿ ಡಿಕ್ಕಿಯಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ. 

ಕೋಲಾರದ ಶ್ರೀನಿವಾಸಪುರ ತಾಲೂಕಿನ ಸೋಮಯಾಜನಪಲ್ಲಿ ಗ್ರಾಮದಲ್ಲಿ ಡಿಪಿಎಲ್ ಟೂರ್ನಿ ನಡೆಸಲಾಗುತ್ತಿತ್ತು. ಈ ವೇಳೆ ರೈಸಿಂಗ್ ಸ್ಟಾರ್ಸ್ ಮತ್ತು ಎಸ್ಎಎಸ್ ಕ್ರಿಕೆಟರ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. 

ಟೆನ್ನಿಸ್ ಬಾಲ್ ಪಂದ್ಯದಲ್ಲಿ ಎಸ್ಎಎಸ್ ಕ್ರಿಕೆಟರ್ಸ್ ಬ್ಯಾಟಿಂಗ್ ಮಾಡುತ್ತಿತ್ತು. ಬ್ಯಾಟ್ಸ್ ಮನ್ ಬಿರುಸಾಗಿ ಚೆಂಡನ್ನು ಬಾರಿಸಿದ್ದು ಚೆಂಡು ಆಗಸಕ್ಕೆ ಚಿಮ್ಮಿತು. ಇದನ್ನು ಚೆಂಡನ್ನು ಹಿಡಿಯುವ ಆತುರದಲ್ಲಿ ಇಬ್ಬರು ಫೀಲ್ಡರ್ಸ್ ಗಳು ಒಬ್ಬರನ್ನೊಬ್ಬರು ನೋಡದೆ ಡಿಕ್ಕಿಯಾಗಿ ಅಲ್ಲೆ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com