ನನ್ನ ಹೇಳಿಕೆಯನ್ನು ಸಂದರ್ಭಾತೀತವಾಗಿ ಬಳಸಲಾಗಿದೆ- ಶೊಯೆಬ್ ಅಖ್ತರ್ 

ಪಾಕಿಸ್ತಾನ ತಂಡದ ಮಾಜಿ ಲೆಗ್ ಸ್ಪಿನ್ನರ್ ದನೀಶ ಕನೇರಿಯಾ ಅವರು ಹಿಂದೂ ಧರ್ಮ ಎಂಬ ಕಾರಣಕ್ಕೆೆ ಅವರನ್ನು ಕೆಲ ಆಟಗಾರರು ತಾರತಮ್ಯ ಮಾಡಿದ್ದರು ಎಂದು ಆರೋಪ ಮಾಡಿದ್ದ ಮಾಜಿ ವೇಗಿ ಶೊಯೆಬ್ ಅಖ್ತರ್ ಸ್ಪಷ್ಟನೆ ನೀಡಲು ಮುಂದಾಗಿದ್ದು, ನನ್ನ ಹೇಳಿಕೆಯನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದು ದೂರಿದ್ದಾರೆ.
ಅಖ್ತರ್
ಅಖ್ತರ್

ಲಾಹೋರ್ : ಪಾಕಿಸ್ತಾನ ತಂಡದ ಮಾಜಿ ಲೆಗ್ ಸ್ಪಿನ್ನರ್ ದನೀಶ ಕನೇರಿಯಾ ಅವರು ಹಿಂದೂ ಧರ್ಮ ಎಂಬ ಕಾರಣಕ್ಕೆೆ ಅವರನ್ನು ಕೆಲ ಆಟಗಾರರು ತಾರತಮ್ಯ ಮಾಡಿದ್ದರು ಎಂದು ಆರೋಪ ಮಾಡಿದ್ದ ಮಾಜಿ ವೇಗಿ ಶೊಯೆಬ್ ಅಖ್ತರ್ ಸ್ಪಷ್ಟನೆ ನೀಡಲು ಮುಂದಾಗಿದ್ದು, ನನ್ನ ಹೇಳಿಕೆಯನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದು ದೂರಿದ್ದಾರೆ.

‘‘ಸಹ ಮಾಜಿ ಆಟಗಾರ ದನೀಶ್ ಕನೇರಿಯಾ ಹಿಂದೂ ಧರ್ಮದವರಾಗಿದ್ದರಿಂದ ಅವರನ್ನು ತಂಡದ ಕೆಲ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಮಾಜಿ ಸ್ಪಿನ್ನರ್ ತಂಡದಲ್ಲಿ ಇರುವುದು ಇಷ್ಟವಿರಲಿಲ್ಲ. ಹಿಂದೂ ಎಂಬ ಕಾರಣಕ್ಕೆೆ ತಂಡದೊಂದಿಗೆ ಊಟ ಮಾಡಲು ಕೂಡ ಸಹ ಬಿಡುತ್ತಿರಲಿಲ್ಲ. ಅಲ್ಲದೇ, ಕನೇರಿಯಾ ಉತ್ತಮ ಪ್ರದರ್ಶನ ನೀಡಿದರೂ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರಲಿಲ್ಲ,’’ ಎಂದು ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ಶೊಯೆಬ್ ಅಖ್ತರ್ ಬಹಿರಂಗ ಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಲೆಗ್ ಸ್ಪಿನ್ನರ್, "ಶೊಯೆಬ್ ಅಖ್ತರ್ ಹೇಳಿರುವುದು ಸತ್ಯ. ತಂಡದಲ್ಲಿದ್ದ ಕೆಲ ಆಟಗಾರರ ಹೀಗೆ ನಡೆದುಕೊಂಡಿದ್ದರು. ಆದರೆ, ನಾನು ಇದಕ್ಕೆೆಲ್ಲ ತಲೆ ಕೆಡಸಿಕೊಂಡಿರಲಿಲ್ಲ. ಏಕೆಂದರೆ, ರಾಷ್ಟ್ರೀತ ಪ್ರತಿನಿಧಿಸುತ್ತಿದ್ದೆೆ. ಎಷ್ಟೇ ಒತ್ತಡವಿದ್ದರೂ ನನಗೆ ಧರ್ಮ ಬದಲಾವಣೆ ಮಾಡಿಕೊಳ್ಳಬೇಕು ಎಂದೆನಿಸಿರಲಿಲ್ಲ." ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com