2020ರಲ್ಲಿ ನಡೆಯಲಿರುವ ಪ್ರಮುಖ ಟೂರ್ನಿಗಳ ವೇಳಾಪಟ್ಟಿ

ಇಂಗ್ಲೆಂಡ್ ನಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಕುಟ ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇಂಗ್ಲೆಂಡ್ ನಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಆದರೆ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಕುಟ ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿದೆ. ಹಲವು ಪ್ರಮುಖ ಟೂರ್ನಿಗಳನ್ನು 2020ರಲ್ಲಿ ಕ್ರೀಡಾಭಿಮಾನಿಗಳು ಕಣ್ಣು ತುಂಬಿಕೊಳ್ಳಲಿದ್ದಾರೆ. ಇದೇ ವರ್ಷ ಟೋಕಿಯೊದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯಲಿದ್ದು, ಎಲ್ಲರ ಚಿತ್ತ ಕದ್ದಿದೆ. 2020ರಲ್ಲಿ ಆಯೋಜಿತ ಪ್ರಮುಖ ಟೂರ್ನಿಗಳ ವೇಳಾಪಟ್ಟಿ ಇಲ್ಲಿದೆ. 
  
ಕ್ರಿಕೆಟ್
ಜನವರಿ 5 ರಿಂದ ಜನವರಿ 10, 2020 – ಭಾರತ ಪ್ರವಾಸ ಬೆಳೆಸಲಿರುವ ಶ್ರೀಲಂಕಾ (3 ಟಿ 20)

ಜನವರಿ 14 ರಿಂದ ಜನವರಿ 19, 2020 - ಭಾರತ ಪ್ರವಾಸ ಬೆಳೆಸಲಿರುವ ಆಸ್ಟ್ರೇಲಿಯಾ (3 ಏಕದಿನ)
  
ಜನವರಿ 17 ರಿಂದ ಫೆಬ್ರವರಿ 9, 2020 - 2020 ಅಂಡರ್ 19 ಕ್ರಿಕೆಟ್ ವಿಶ್ವಕಪ್
  
ಜನವರಿ 24 ರಿಂದ ಮಾರ್ಚ್ 4, 2020 - ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ (5 ಟಿ 20, 3 ಏಕದಿನ ಮತ್ತು 2 ಟೆಸ್ಟ್)
  
ಫೆಬ್ರವರಿ 21 ರಿಂದ ಮಾರ್ಚ್ 8, 2020 - ಐಸಿಸಿ ಮಹಿಳಾ ಟಿ 20 ಕ್ರಿಕೆಟ್ ವಿಶ್ವಕಪ್ 2020
  
ಮಾರ್ಚ್ 12 ರಿಂದ ಮಾರ್ಚ್ 18, 2020 - ಭಾರತ ಪ್ರವಾಸ ಬೆಳೆಸಲಿರುವ ಆಫ್ರಿಕಾ (3 ಏಕದಿನ)
  
ಮಾರ್ಚ್ 29, 2020 ರಿಂದ - ಐಪಿಎಲ್ 2020
  
ಜೂನ್ ರಿಂದ ಜುಲೈ 2020 - ಶ್ರೀಲಂಕಾಕ್ಕೆ ಭಾರತದ ಪ್ರವಾಸ (3 ಟಿ 20 ಮತ್ತು 3 ಏಕದಿನ)
  
ಸೆಪ್ಟೆಂಬರ್ 2020 - ಏಷ್ಯಾ ಕಪ್
  
ಸೆಪ್ಟೆಂಬರ್ ರಿಂದ ಅಕ್ಟೋಬರ್ 2020 - ಭಾರತ ಪ್ರವಾಸ ಬೆಳೆಸಲಿರುವ ಇಂಗ್ಲೆಂಡ್ (3 ಏಕದಿನ ಮತ್ತು 3 ಟಿ 20)
  
ಅಕ್ಟೋಬರ್ 2020 - ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ (3 ಟಿ 20)
  
ಅಕ್ಟೋಬರ್ 18 ರಿಂದ ನವೆಂಬರ್ 15, 2020 - ಐಸಿಸಿ ಪುರುಷರ ಟಿ 20 ಕ್ರಿಕೆಟ್ ವಿಶ್ವಕಪ್ 2020
  
ಡಿಸೆಂಬರ್ 2020 ರಿಂದ ಜನವರಿ 2021 - ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ (4 ಟೆಸ್ಟ್ ಮತ್ತು 3 ಏಕದಿನ)
  
ಒಲಿಂಪಿಕ್ಸ್ 2020 (ಟೋಕಿಯೊ)
ಜುಲೈ 24, 2020 ರಿಂದ ಆಗಸ್ಟ್ 9, 2020 - ಒಲಿಂಪಿಕ್ಸ್ 2020 (ಟೋಕಿಯೊ)
  
ಟೆನಿಸ್
ಜನವರಿ 20 ರಿಂದ 2020 ಫೆಬ್ರವರಿ - ಆಸ್ಟ್ರೇಲಿಯನ್ ಓಪನ್ (ಆಸ್ಟ್ರೇಲಿಯಾ)
  
ಮೇ 24 ರಿಂದ ಜೂನ್ 7, 2020 - ಫ್ರೆಂಚ್ ಓಪನ್ (ಫ್ರಾನ್ಸ್)
  
ಜೂನ್ 29 ರಿಂದ ಜುಲೈ 12, 2020 - ವಿಂಬಲ್ಡನ್ ಚಾಂಪಿಯನ್‌ಶಿಪ್ (ಇಂಗ್ಲೆಂಡ್)
  
ಆಗಸ್ಟ್ 31 ರಿಂದ ಸೆಪ್ಟೆಂಬರ್ 13, 2020 - ಯುಎಸ್ ಓಪನ್ (ಯುಎಸ್ಎ)
  
ಬ್ಯಾಡ್ಮಿಂಟನ್
ಮಾರ್ಚ್ 11 ರಿಂದ ಮಾರ್ಚ್ 15, 2020- ಆಲ್ ಇಂಗ್ಲೆಂಡ್ ಟೂರ್ನಿ 
  
ಏಪ್ರಿಲ್ 7 ರಿಂದ ಏಪ್ರಿಲ್ 12, 2020- ಸಿಂಗಾಪುರ್ ಓಪನ್ 
 
ಜೂನ್ 2 ರಿಂದ ಜೂನ್ 7, 2020- ಆಸ್ಟ್ರೇಲಿಯಾ ಓಪನ್ 
  
ನವಂಬರ್ 17 ರಿಂದ ನವಂಬರ್ 22, 2020- ಸೈಯದ್ ಮೋದಿ ಟೂರ್ನಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com