2019 ವಿಶ್ವಕಪ್ ಕ್ರಿಕೆಟ್ : ಭಾರತ ಫೇವರಿಟ್ ತಂಡ - ರಾಹುಲ್ ದ್ರಾವಿಡ್

ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಆರಂಭಗೊಳ್ಳಲಿರುವ 2019 ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೇವರಿಟ್ ತಂಡವಾಗಿದ್ದು, ಟೀಂ ಇಂಡಿಯಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ರಾಹುಲ್  ದ್ರಾವಿಡ್
ರಾಹುಲ್ ದ್ರಾವಿಡ್

ತ್ರಿವೇಂದ್ರಮ್ : ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಆರಂಭಗೊಳ್ಳಲಿರುವ  2019  ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೇವರಿಟ್ ತಂಡವಾಗಿದ್ದು,  ಟೀಂ ಇಂಡಿಯಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದಾಗಿ  ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್  ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಪ್ರಸ್ತುತ ಭಾರತ ತಂಡ ಉತ್ತಮ ರೀತಿಯಲ್ಲಿ ಕ್ರಿಕೆಟ್ ಆಡುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ಫೇವರಿಟ್ ಅನ್ನಿಸುತ್ತಿದೆ ಎಂದು  ಸುದ್ದಿಗಾರರೊಂದಿಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ವರ್ಷ  ಏಷ್ಯಾಕಪ್, ಸೇರಿದಂತೆ  ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್,  ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದು ಟೀಂ ಇಂಡಿಯಾ ಉತ್ತಮ  ಪ್ರದರ್ಶನ ತೋರುತ್ತಿದೆ.

ಭಾರತ ಎ ತಂಡ ಇಂಗ್ಲೆಂಡ್ ನಲ್ಲಿ 300ರವರೆಗೂ ರನ್ ಗಳಿಸಿದೆ. ಈ ಬಾರಿಯ ವಿಶ್ವಕಪ್ ನಲ್ಲಿ  ಟೀಂ ಇಂಡಿಯಾದಿಂದ ಉತ್ತಮ ರನ್ ಗಳು ಹರಿದು ಬರುವ ಸಾಧ್ಯತೆ ಇದೆ ಎಂದು  ಭಾರತ ಎ ಹಾಗೂ 19 ವರ್ಷದೊಳಗಿವರ ತಂಡದ ಮುಖ್ಯ ತರಬೇತುದಾರರಾಗಿರುವ ರಾಹುಲ್ ದ್ರಾವಿಡ್ ಹೇಳಿದ್ದಾರೆ.

1999ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ವೇಳೆ ರಾಹುಲ್ ದ್ರಾವಿಡ್  461 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಆಗಿದ್ದರು. ಆದರೆ, 2019ರ ವಿಶ್ವಕಪ್ ವಿಭಿನ್ನವಾಗಿರಲಿದೆ. ಇಂಗ್ಲೆಂಡ್ ಬ್ಯಾಟಿಂಗ್ ಸ್ನೇಹಿ ವಿಕೆಟ್  ನೆಲವಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com