ಐಸಿಸಿ ಮಹಿಳಾ ಕ್ರಿಕೆಟ್ ರ್ಯಾಂಕಿಂಗ್: ಸ್ಮೃತಿ ಮಂಧಾನ ವಿಶ್ವ ನಂ.1 ಏಕದಿನ ಬ್ಯಾಟ್ಸ್ ಮನ್!

ಭಾರತದ ಮಹಿಳಾ ಕ್ರಿಕೆಟ್ ನ ಸ್ತಾರ್ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ (ರ್ಯಾಂಕಿಂಗ್) ನಲ್ಲಿ ವಿಶ್ವ ನಂ. 1 ಆಗಿ ಹೊರಹೊಮ್ಮಿದ್ದಾರೆ.
ಸ್ಮೃತಿ ಮಂಧಾನ
ಸ್ಮೃತಿ ಮಂಧಾನ
ದುಬೈ: ಭಾರತದ ಮಹಿಳಾ ಕ್ರಿಕೆಟ್ ನ ಸ್ತಾರ್ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ (ರ್ಯಾಂಕಿಂಗ್) ನಲ್ಲಿ ವಿಶ್ವ ನಂ. 1 ಆಗಿ ಹೊರಹೊಮ್ಮಿದ್ದಾರೆ.
ಶನಿವಾರ ಬಿಡುಗಡೆಗೊಂಡ ಐಸಿಸಿ ಕ್ರಿಕೆಟ್ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮಂಧಾನ ಮೂರು ಸ್ಥಾನ ಬಡ್ತಿ ಪಡೆದು ಅಗ್ರ ಶ್ರೇಯಾಂಕಿತೆ ಎನಿಸಿದ್ದಾರೆ.
ಇತ್ತೀಚೆಗೆ ನ್ಯೂಜಿಲ್ಯಾಂಡ್ ನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಶತಕ ಹಾಗೂ ಅಜೇಯ 90 ರನ್ ಗಳಿಸಿದ್ದ ಮಂಧಾನ ಆಸ್ಟ್ರೇಲಿಯಾದ ಎಲ್ಲೀಸ್ ಪೆರ್ರಿ ಮತ್ತು ಮೆಗ್ ಲ್ಯಾನ್ನಿಂಗ್ ಅವರನ್ನು ಹಿಂದಾಗಿಸಿ ನಂ.1 ಸ್ಥಾನಕ್ಕೇರಿದ್ದಾರೆ.
ಮುಂಬೈ ಮೂಲದ ಸ್ಮೃತಿ 2018ರ ಪ್ರಾರಂಭದಿಂಡ  ಏಕದಿನ ಕ್ರಿಕೆಟ್ ನಲ್ಲಿ ಶ್ರೇಷ್ಠ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದರು. ಅವರು ಈ ನಡುವೆ ಆಡಿರುವ 15 ಪಂದ್ಯಗಳಲ್ಲಿ ಎರಡು ಶತಕ ಹಾಗೂ ಎಂಟು ಅರ್ಧಶತಕಗಳನ್ನು ಗಳಿಸಿದ್ದರು.
ಇನ್ನು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ 81 ರನ್ ಗಳಿಸಿದ್ದ ಭಾರತೀಯ ಆಟಗಾರ್ತಿ ಜಿಮಿಯಾ ರೋಡ್ರಿಗಸ್ ತಾವು 61ನೇ ಸ್ಥಾನಕ್ಕೇರಿದ್ದಾರೆ.18ರ ಹರೆಯದ ಆಟಗಾರ್ತಿ ರೋಡ್ರಿಗಸ್ ಇದುವರೆಗೆ ಕೇವಲ ಏಳು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.
ಇನ್ನು ಬೌಲರ್ ಗಳಾದ ಪೂನಂ ಯಾದವ್, ದೀಪ್ತಿ ಶರ್ಮಾ ಕ್ರಮವಾಗಿ 8 ಹಾಗೂ 9ನೇ ಸ್ಥಾನದಲ್ಲಿದ್ದಾರೆ. ಇನ್ನೋರ್ವ ಆಟಗಾರ್ತಿ ಏಕ್ತಾ ಬಿಕ್ತ್ 12ನೇ ಸ್ಥಾನ ಅಲಂಕರಿಸಿದ್ದಾರೆ.
ಭಾರತದ ಹಿರಿಯ, ಅನುಭವಿ ಆಟಗಾರ್ತಿ ಜುಲನ್ ಗೋಸ್ವಾಮಿ ನಾಲ್ಕನೇ ಶ್ರೇಯಾಂಕದಲ್ಲಿದ್ದು ಅಗ್ರ ಐದು ಆಟಗಾರರ ಪೈಕಿ ಇರುವ ಭಾರತದ ಏಕೈಕ ಕ್ರೀಡಾತಾರೆ ಎನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com