ಧೋನಿ ಮಿಂಚಿನ ರನೌಟ್
ಧೋನಿ ಮಿಂಚಿನ ರನೌಟ್

ಮಾಸ್ಚರ್ ಮೈಂಡ್ ಧೋನಿ ಚಾಣಾಕ್ಷತನಕ್ಕೆ ಕಿವೀಸ್ ಪಡೆಯ ಮತ್ತೋರ್ವ ಬ್ಯಾಟ್ಸಮನ್ ಬಲಿ!

ಟೀಂ ಇಂಡಿಯಾ ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದಿರುಪ ಕೂಲ್ ಪ್ಲೇಯರ್ ಎಂಎಸ್ ಧೋನಿ ತಮ್ಮ ಚಾಣಾಕ್ಷ ತನದಿಂದ ಮತ್ತೋರ್ವ ಬ್ಯಾಟ್ಸಮನ್ ರನ್ನು ಬಲಿ ಪಡೆದಿದ್ದಾರೆ.
ವೆಲ್ಲಿಂಗ್ಟನ್: ಟೀಂ ಇಂಡಿಯಾ ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದಿರುಪ ಕೂಲ್ ಪ್ಲೇಯರ್ ಎಂಎಸ್ ಧೋನಿ ತಮ್ಮ ಚಾಣಾಕ್ಷ ತನದಿಂದ ಮತ್ತೋರ್ವ ಬ್ಯಾಟ್ಸಮನ್ ರನ್ನು ಬಲಿ ಪಡೆದಿದ್ದಾರೆ.
ಹೌದು.. ನಿನ್ನೆ ವೆಲ್ಲಿಂಗ್ಟನ್ ನಲ್ಲಿ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 35 ರನ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದ್ದು ಮಾತ್ರವಲ್ಲದೇ 5 ಪಂದ್ಯಗಳ ಏಕದಿನ ಸರಣಿಯನ್ನು 4-1ರಲ್ಲಿ ತನ್ನ ಕೈವಶ ಮಾಡಿಕೊಂಡಿತು. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದಿರುಪ ಕೂಲ್ ಪ್ಲೇಯರ್ ಎಂಎಸ್ ಧೋನಿ ತಮ್ಮ ಚಾಣಾಕ್ಷ ತನದಿಂದ ಕಿವೀಸ್ ಪಡೆಯ ಜೇಮ್ಸ್ ನೀಶಮ್ ರನ್ನು ಅದ್ಭುತ ರೀತಿಯಲ್ಲಿ ರನೌಟ್ ಮಾಡುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 
253 ರನ್ ಟಾರ್ಗೆಟ್​ ಅನ್ನು ಬೆನ್ನತ್ತಿದ್ದ ಕಿವೀಸ್ ಆಟಗಾರರು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 150 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡರೂ, ನಂತರ ತಂಡಕ್ಕೆ ಆಲ್ ​ರೌಂಡರ್​ ಜೇಮ್ಸ್ ನೀಶಮ್ ಆಸರೆಯಾಗಿದ್ದರು. ಹೊಡಿ ಬಡಿ ಆಟದ ಮೂಲಕ ತಂಡಕ್ಕೆ ರನ್ ಗಳ ಸುರಿಮಳೆ ಸುರಿಸಿದ್ದರು. 32 ಎಸೆತಗಳಲ್ಲಿ 44 ರನ್ ಗಳನ್ನು ನೀಶಮ್ ಸಿಡಿಸಿದ್ದರು. ಇದರಲ್ಲಿ ನಾಲ್ಕು ಬೌಂಡರಿ ಎರಡು ಸಿಕ್ಸರ್ ಒಳಗೊಂಡಿತ್ತು. ಇನ್ನೇನು ಪಂದ್ಯವನ್ನು ನ್ಯೂಜಿಲ್ಯಾಂಡ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಧೋನಿ ತಮ್ಮ ಕೈ ಚಳಕ ತೋರಿಸಿದ್ದರು.
ಇನ್ನಿಂಗ್ಸ್ ನ 37ನೇ ಓವರ್ ನ 3ನೇ ಎಸೆತ ಎಸೆದ ಕೇದರ್​ ಜಾಧವ್​ ಎಲ್​ಬಿಡಬ್ಲ್ಯೂ ಮನವಿ ಮಾಡಿದರು. ಇದಕ್ಕೆ ಧೋನಿ ಕೂಡ ಧನಿ ಗೂಡಿಸಿದರು. ಅತ್ತ ಭಾರತದ ಆಟಗಾರರು ಮನವಿ ಸಲ್ಲಿಸುತ್ತಿದ್ದಂತೆಯೇ ಇತ್ತ ನೀಶಮ್ ಸಿಂಗಲ್ ರನ್ ಕದಿಯಲು ಮುಂದಾದರು. ಇದೇ ವೇಳೆ ನೀಶಮ್ ಚಲನವಲನಗಳನ್ನು ಗಮನಿಸುತ್ತಾ ಅಪೀಲ್ ಮಾಡುತ್ತಿದ್ದ ಧೋನಿ, ಕ್ಷಣ ಮಾತ್ರದಲ್ಲಿ ಚೆಂಡನ್ನು ವಿಕೆಟ್ ಗೆ ಎಸೆದು ಬೇಲ್ಸ್ ಎಗರಿಸಿದರು. ಆ ಮೂಲಕ ನೀಶಮ್ ರನೌಟ್ ಗೆ ಬಲಿಯಾಗಿದ್ದರು. 
ಧೋನಿಯ ಈ ಚಾಣಾಕ್ಷ ನಡೆಯಿಂದ ನೀಶಮ್​ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು. ಈ ಒಂದು ಥ್ರೋ ಪಂದ್ಯದ ಗತಿಯನ್ನೇ ಬದಲಿಸುವಂತೆ ಮಾಡಿತು. ಧೋನಿಯ ಚಾಣಾಕ್ಷತನಕ್ಕೆ ಮತ್ತೊಮ್ಮೆ ಕ್ರಿಕೆಟ್​ ಜಗತ್ತು ತಲೆ ಬಾಗಿದೆ. ಅಂತೆಯೇ ಅತ್ಯುತ್ತಮವಾಗಿ ಆಡುತ್ತಿದ್ದ ನ್ಯೂಜಿಲ್ಯಾಂಡ್​ ತಂಡವನ್ನು ಸೋಲಿಗೆ ಸಿಲುಕಿಸಿದ್ದೇ ಧೋನಿಯ ರನೌಟ್​ ಎಂದು ವಿಶ್ಲೇಷಿಸಲಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com