ಭಾರತ-ಆಸಿಸ್ ಟಿ20: ಶೇ.10ರಷ್ಟು ಉಚಿತ ಟಿಕೆಟ್ ನಿಯಮ ಪಾಲನೆ ಸಾಧ್ಯವಿಲ್ಲ ಎಂದ ಕೆಎಸ್ ಸಿಎ

ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯದ ಟಿಕೆಟ್ ಗಳಿಗೆ ಭಾರಿ ಬೇಡಿಕೆ ಇದ್ದು, ಶೇ.10ರಷ್ಟು ಉಚಿತ ಟಿಕೆಟ್ ನಿಯಮ ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ)ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯದ ಟಿಕೆಟ್ ಗಳಿಗೆ ಭಾರಿ ಬೇಡಿಕೆ ಇದ್ದು, ಶೇ.10ರಷ್ಟು ಉಚಿತ ಟಿಕೆಟ್ ನಿಯಮ ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ)ಹೇಳಿದೆ.
ಈ ಬಗ್ಗೆ ಮಾತನಾಡಿರುವ ಕೆಎಸ್ ಸಿಎ ಅಧಿಕಾರಿಯೊಬ್ಬರು, ಬೆಂಗಳೂರಿನಲ್ಲಿ ನಡೆಯುವ ಯಾವುದೇ ಪಂದ್ಯದ ಶೇ.10ರಷ್ಟು ಟಿಕೆಟ್ ಗಳನ್ನು ತನ್ನ ಪದಾಧಿಕಾರಿಗಳಿಗೆ, ಸದಸ್ಯ ಕ್ಲಬ್ ಗಳಿಗೆ ಮತ್ತು ಆಟಗಾರರಿಗೆ ನೀಡಬೇಕು ಎಂಬ ನಿಯಮವೇನೋ ಇದೆ. ಆದರೆ ಅದನ್ನು ಯಾವಾಗಲೂ ಪಾಲನೆ ಮಾಡಲು ಸಾಧ್ಯವಿಲ್ಲ.  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಹೈ ವೋಲ್ಟೇಜ್ ಪಂದ್ಯವಾಗಿದ್ದು, ಈಗಾಗಲೇ ಈ ಪಂದ್ಯದ ಟಿಕೆಟ್ ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಒಂದು ವೇಳೆ ನಾವು ಉಚಿತ ಟಿಕೆಟ್ ನಿಯಮವನ್ನು ಪಾಲನೆ ಮಾಡುತ್ತೇವೆ ಎಂದಿಟ್ಟುಕೊಳ್ಳಿ ಆಗ, ಟೆಕೆಟ್ ಗಳಿಗೆ ಖಂಡಿತಾ ಕೊರತೆ ಉಂಟಾಗುತ್ತದೆ. ಕಾರಣ ಕೆಎಸ್ ಸಿಎ ಸದಸ್ಯ ಕ್ಲಬ್ ಮೆಂಬರ್ ಗಳಿಗೆ, ಆಟಗಾರರಿಗೆ, ಪದಾಧಿಕಾರಿಗಳಿಗೆ ಟಿಕೆಟ್ ನೀಡಬೇಕು. ಇಷ್ಟು ಮಾತ್ರವಲ್ಲದೆ ಬಿಸಿಸಿಐ ಅಧಿಕಾರಿಗಳಿಗೂ ಟಿಕೆಟ್ ನೀಡಬೇಕು. ನಾವು ಆಯೋಜಿಸುವ ಲೀಗ್ ಗಳಲ್ಲಿ  ಪಾಲ್ಗೊಳ್ಳುವ ಆಟಗಾರರು ಮತ್ತು ಅಧಿಕಾರಿಗಳಿಗೂ ಟಿಕೆಟ್ ನೀಡಬೇಕಾಗುತ್ತದೆ. ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧೀನದಲ್ಲಿ 334 ಕ್ರಿಕೆಟ್ ಕ್ಲಬ್ ಗಳಿದ್ದು ಎಲ್ಲ ಕ್ಲಬ್ ಗಳಿಗೂ ಟಿಕೆಟ್ ನೀಡಿದರೆ ಆಗ ಪ್ರೇಕ್ಷಕರಿಗೇ ಟಿಕೆಟ್ ಇಲ್ಲದಂತಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಈ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿಗೆ ತಿಳಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಬಿಸಿಸಿಐ ಪಾಲಿನ ಟಿಕೆಟ್ ಗಳನ್ನು ನಾವು ನೀಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕಿದೆ. ಇದೇ ವೇಳೆ ಸ್ಥಳೀಯ ಕ್ರಿಕೆಟಿಗರಿಗೂ ನಾವು ಪ್ರಾಮುಖ್ಯತೆ ನೀಡಬೇಕಿದ್ದು, ಎಷ್ಟು ಟಿಕೆಟ್ ಗಳನ್ನು ಯಾರಿಗೆ ನೀಡಬೇಕು ಎಂಬಿತ್ಯಾದಿ ಅಂಶಗಳನ್ನು ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com