ನಿರ್ಧಾರ ಕೈಗೊಳ್ಳುವಲ್ಲಿ ಧೋನಿ ನಿಸ್ಸೀಮರು- ಯುವರಾಜ್ ಸಿಂಗ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರತಿನಿಧಿಸುವ ತಂಡದಲ್ಲಿ ನಿರ್ಧಾರ ಕೈಗೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Published: 08th February 2019 12:00 PM  |   Last Updated: 08th February 2019 07:53 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : ANI
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರತಿನಿಧಿಸುವ ತಂಡದಲ್ಲಿ ನಿರ್ಧಾರ ಕೈಗೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಕ್ಯಾಪ್ಟನ್ ಆಗಿ ಧೋನಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ವಿಕೆಟ್ ಹಿಂದೆ ಅನೇಕ  ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಧೋನಿ  ಅತ್ಯುತ್ತಮ ಕ್ರಿಕೆಟ್ ಬ್ರೇನ್ ಅನ್ನಿಸುತ್ತದೆ.  ವಿಕೆಟ್ ಕೀಪರ್ ಆಗಿ ಉತ್ತಮವಾಗಿ ಪಂದ್ಯವನ್ನು ನಿರ್ವಹಣೆ ಮಾಡುತ್ತಾರೆ ಎಂದು ಯುವರಾಜ್ ಸಿಂಗ್ ಹಾಡಿ ಹೊಗಳಿದ್ದಾರೆ.

ಎಂ.ಎಸ್. ಧೋನಿ ಉತ್ತಮ ಕ್ಯಾಪ್ಟನ್ ಆಗಿ  ವಿರಾಟ್ ಕೊಹ್ಲಿಯಂತಹ ಯುವ ಆಟಗಾರರಿಗೆ ಮೈದಾನದಲ್ಲಿಯೇ ಮಾರ್ಗದರ್ಶನ ನೀಡಿದ್ದಾರೆ.ಆಸ್ಟ್ರೇಲಿಯಾದಲ್ಲಿ ಇತ್ತೀಚಿಗೆ ನಡೆದ ಟೂರ್ನಿಯಲ್ಲಿ ಅತ್ಯದ್ಬುತ ರೀತಿಯಲ್ಲಿ ಆಟವಾಡಿದ್ದಾರೆ ಎಂದು ಯುವರಾಜ್ ಸಿಂಗ್ ಶ್ಲಾಘಿಸಿದ್ದಾರೆ.

ರೋಹಿತ್ ಶರ್ಮಾ ಅವರ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ಪರ ಮುಂಬರುವ ಐಪಿಎಲ್  ಆವೃತ್ತಿಯಲ್ಲಿ ಆಡಲು ಕಾತುರರಾಗಿರುವುದಾಗಿ ಅವರು ಹೇಳಿದ್ದಾರೆ.

ರೋಹಿತ್ ಶರ್ಮಾ ಅತ್ಯದ್ಬುತ ನಾಯಕ. ಅವರೊಬ್ಬ ಯಶಸ್ವಿ ಆರಂಭಿಕ ಆಟಗಾರರಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ತಾವೂ ಆಡಬಹುದು, ಅವರ ಎಂದಿನಂತ ಪಂದ್ಯಗಳಂತೆ ಆಡಲಿದ್ದಾರೆ. ಹೇಗೆ ಹೊಂದಾಣಿಕೆಯಾಗುತ್ತದೆ ಎಂಬುದುನ್ನು ಕಾದು ನೋಡಿ ಎಂದಿದ್ದಾರೆ.

ಪಂಜಾಬಿನ ಯುವ ಆಟಗಾರ  ಸುಬ್ಮಾನ್ ಗಿಲ್  ಬಗ್ಗೆ ಮಾತನಾಡಿದ ಯುವರಾಜ್ ,  ಆತನ ಬೆಳವಣಿಗೆ ಕಂಡು ಸಂತೋಷವಾಗುತ್ತಿದೆ.  ಆತ ಸಾಕಷ್ಟು ಪ್ರಗತಿಯಾಗಿರುವುದಾಗಿ ಹೇಳಿದ್ದಾರೆ.

ಯುವರಾಜ್ ಸಿಂಗ್ 304 ಏಕದಿನ ಪಂದ್ಯಗಳಲ್ಲಿ 36.56 ಸರಾಸರಿಯಲ್ಲಿ 8701 ರನ್ ಗಳಿಸಿದ್ದಾರೆ. 58 ಟಿ-20 ಪಂದ್ಯಗಳಲ್ಲಿ  28.02 ಸರಾಸರಿಯಲ್ಲಿ 1177 ರನ್ ಗಳಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp