ಒಂದಲ್ಲ, ಎರಡಲ್ಲ ಟಿ20 ಕ್ರಿಕೆಟ್‌ನಲ್ಲಿ ರೋ'ಹಿಟ್' 6 ವಿಶ್ವ ದಾಖಲೆಗಳು, ಪಟ್ಟಿ ಇಲ್ಲಿದೆ!

ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ತಂಡದ ನಾಯಕ ರೋಹಿತ್ ಶರ್ಮಾ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

Published: 08th February 2019 12:00 PM  |   Last Updated: 08th February 2019 05:55 AM   |  A+A-


Rohit Sharma

ರೋಹಿತ್ ಶರ್ಮಾ

Posted By : VS VS
Source : The New Indian Express
ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ತಂಡದ ನಾಯಕ ರೋಹಿತ್ ಶರ್ಮಾ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 

* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ನ್ಯೂಜಿಲ್ಯಾಂಡ್ ತಂಡದ ಆಟಗಾರ ಮಾರ್ಟಿನ್ ಗುಪ್ಟಿಲ್ ಅವರ ವಿಶ್ವ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. ಸದ್ಯ ರೋಹಿತ್ ಶರ್ಮಾ 2288 ರನ್ ಪೇರಿಸುವ ಮೂಲಕ ಅಗ್ರ ಆಟಗಾರನಾಗಿದ್ದಾರೆ.

* ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸುವವ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ. ಕ್ರಿಸ್ ಗೇಯ್ಲ್ ಹಾಗೂ ಮಾರ್ಟಿನ್ ಗುಪ್ಟಿಲ್ ಇಬ್ಬುರ 103 ಸಿಕ್ಸ್ ಬಾರಿಸಿದ್ದರೆ ರೋಹಿತ್ ಶರ್ಮಾ 102 ಸಿಕ್ಸರ್ ಬಾರಿಸಿದ್ದಾರೆ. 

* ಜಗತ್ತಿನಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಕ್ಸರ್ ಬಾರಿಸಿರುವ ಮೂರನೇ ಆಟಗಾರ ರೋಹಿತ್ ಶರ್ಮಾ.

* ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿರುವವರ ಪಟ್ಟಿಯಲ್ಲಿ ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ(349 ಸಿಕ್ಸರ್), ಶಾಯೀದ್ ಅಫ್ರಿದಿ ಮತ್ತು ಕ್ರಿಸ್ ಗೇಯ್ಲ್(476 ಸಿಕ್ಸರ್), ಬ್ರೆಂಡನ್ ಮೆಕಲಮ್(398) ಮತ್ತು ಸನತ್ ಜಯಸೂರ್ಯ(352) ಸಿಕ್ಸರ್ ಬಾರಿಸಿದ್ದಾರೆ.

* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 20ಕ್ಕೂ ಹೆಚ್ಚು ಬಾರಿ ಅರ್ಧ ಶತಕ ಸಿಡಿಸಿರುವ ಆಟಗಾರ. ವಿರಾಟ್ ಕೊಹ್ಲಿ 19 ಬಾರಿ ಅರ್ಧ ಶತಕ ಸಿಡಿಸಿದ್ದಾರೆ. 

* ಅಂತಾರಾಷ್ಟ್ರೀಯ ಮೂರು ಕ್ರಿಕೆಟ್ ಮಾದರಿಗಳಲ್ಲಿಯೂ ಸೇರಿ ರೋಹಿತ್ ಶರ್ಮಾ ಒಟ್ಟಾರೆ 349 ಸಿಕ್ಸರ್ ಬಾರಿಸಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp