ಮಾರ್ಟಿನ್ ಗಪ್ಟಿಲ್ ವಿಶ್ವ ದಾಖಲೆ ಧೂಳಿಪಟ; ರೋ'ಹಿಟ್' ಶರ್ಮಾ ಟಿ20 ಕ್ರಿಕೆಟ್‌ನ ನಂ 1!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಮಾರ್ಟಿನ್ ಗಪ್ಟಿಲ್ ಅವರ ವಿಶ್ವ ದಾಖಲೆಯನ್ನು...
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಆಕ್ಲೆಂಡ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಮಾರ್ಟಿನ್ ಗಪ್ಟಿಲ್ ಅವರ ವಿಶ್ವ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. 
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾರ್ಟಿನ್ ಗುಪ್ಟಿಲ್ ಒಟ್ಟಾರೆ 79 ಪಂದ್ಯಗಳಲ್ಲಿ 2272 ರನ್ ಪೇರಿಸಿದ್ದರು. ಇದೀಗ ರೋಹಿತ್ ಶರ್ಮಾ 92ನೇ ಪಂದ್ಯದಲ್ಲಿ 2288 ರನ್ ಪೇರಿಸುವ ಮೂಲಕ ಮಾರ್ಟಿನ್ ಗುಪ್ಟಿಲ್ ಅವರ ವಿಶ್ವ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಬ್ಯಾಟ್ಸ್ ಮನ್ ಗಳು:
* ರೋಹಿತ್ ಶರ್ಮಾ: 2288
* ಮಾರ್ಟಿನ್ ಗುಪ್ಟಿಲ್: 2272
* ಶೋಯಿಬ್ ಮಲಿಕ್: 2263 
* ವಿರಾಟ್ ಕೊಹ್ಲಿ: 2167
* ಬ್ರೆಂಡನ್ ಮೆಕಲಮ್: 2140

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com