ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಸೋತ ಟೀಂ ಇಂಡಿಯಾ ಮಹಿಳಾ ತಂಡ!

ತೀವ್ರ ಕುತೂಹಲ ಕೆರಳಿಸಿದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ಮಹಿಳಾ ತಂಡ ಕೊನೆಯ ಎಸೆತದಲ್ಲಿ ಭಾರತದ ವಿರುದ್ಧ ಜಯ ಸಾಧಿಸಿತು.

Published: 08th February 2019 12:00 PM  |   Last Updated: 08th February 2019 11:55 AM   |  A+A-


ಸಂಗ್ರಹ ಚಿತ್ರ

Posted By : VS VS
Source : UNI
ಆಕ್ಲೆಂಡ್: ತೀವ್ರ ಕುತೂಹಲ ಕೆರಳಿಸಿದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ಮಹಿಳಾ ತಂಡ ಕೊನೆಯ ಎಸೆತದಲ್ಲಿ ಭಾರತದ ವಿರುದ್ಧ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಚುಟುಕು ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ತನ್ನ ತೆಕ್ಕೆಗೆ ಹಾಕಿಕೊಂಡಿತು. 

ಭಾರತ ನೀಡಿದ್ದ 136 ರನ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು. ಚುಟುಕು ಸರಣಿಯನ್ನು ವಶಪಡಿಸಿಕೊಂಡಿತು. ಏಕದಿನ ಸರಣಿ ಸೋತಿದ್ದ ನ್ಯೂಜಿಲೆಂಡ್‌ಗೆ ಚುಟುಕು ಸರಣಿ ಗೆಲುವು ಸಮಾಧಾನ ತಂದಿದೆ.

ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ ಗೆಲುವಿಗೆ 9 ರನ್‌ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿ ಇದ್ದ ಕೇಟೀ ಮಾರ್ಟಿನ್, ಮಾನಸಿ ಜೋಷಿ ಅಂತಿಮ ಓವರ್‌ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಬಳಿಕ, ಎರಡನೇ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ನಂತರ ಕ್ರೀಸ್‌ಗೆ ಬಂದ ಹನ್ನಾ ರೋವ್ ಮೂರನೇ ಎಸೆತದಲ್ಲಿ ಎರಡು ರನ್‌ ಗಳಿಸಿದರು. ನಂತರ, ಮೂರು ಎಸೆತಗಳಲ್ಲಿ ಮೂರು ರನ್ ಅಗತ್ಯವಿತ್ತು. ಇನ್ನುಳಿದ ಮೂರು ಎಸೆತಗಳಲ್ಲೂ ಕಿವಿಸ್‌ ಆಟಗಾರ್ತಿಯರು ಮೂರು ಸಿಂಗಲ್ಸ್‌ ಆಡುವ ಮೂಲಕ ನಿಗದಿತ 20 ಓವರ್‌ ಮುಕ್ತಾಯಕ್ಕೆ ಕಿವಿಸ್‌ ಗೆಲುವಿನ ನಗೆ ಬೀರಿತು. 

ನ್ಯೂಜಿಲೆಂಡ್ ಪರ ಸೂಜಿ ಬೇಟ್ಸ್‌ 52 ಎಸೆತಗಳಲ್ಲಿ 62 ರನ್‌ ಹಾಗೂ ನಾಯಕಿ ಆಮಿ 23 ರನ್ ಗಳಿಸಿ ತಂಡದ ಗೆಲುವಿನಲ್ಲಿ ವಿಶೇಷ ಪಾತ್ರ ವಹಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಸೂಜಿ ಬೇಟ್ಸ್ ಪಾತ್ರರಾದರು. 

ಇದಕ್ಕೂ ಮುನ್ನ ಈಡನ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವನಿತೆಯರು ನಿಗದಿತ 20 ಓವರ್‌ಗಳಲ್ಲಿ 135 ರನ್‌ ದಾಖಲಿಸಿ, ಕಿವಿಸ್‌ಗೆ 136 ರನ್‌ ಗುರಿ ನೀಡಿದ್ದರು.

ನ್ಯೂಜಿಲೆಂಡ್‌ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ನಡುವೆಯೂ ಆರಂಭಿಕ  ಆಟಗಾರ್ತಿ ಜೆಮಿಮಾ ರೊಡ್ರಿಗಸ್ ( 72 ರನ್‌, 53 ಎಸೆತಗಳು) ಅವರ ಏಕೈಕ ಅರ್ಧ ಶತಕದ  ನೆರವಿನಿಂದ ಭಾರತ ವನಿತೆಯರು ಕಿವಿಸ್‌ಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 

ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಸ್ಮೃತಿ, 27 ಎಸೆತಗಳಿಗೆ ಒಂದು ಸಿಕ್ಸ್‌ ಹಾಗೂ ಮೂರು ಬೌಂಡರಿಯೊಂದಿಗೆ 36 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಇವರನ್ನು ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ವಿಫಲರಾಗಿದ್ದರು. ರೋಸ್ಮರಿ ಮೈರ್ ಎರಡು  ವಿಕೆಟ್‌ ಪಡೆದರೆ, ಸೋಫಿ ಡಿವೈನ್‌, ಕ್ಯಾಸ್ಪರೆಕ್ ಹಾಗೂ ಅಮೆಲಿಯಾ ಕೆರ್ ತಲಾ ಒಂದೊಂದು  ವಿಕೆಟ್‌ ತೆಗೆದರು.
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp