ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರು, ಸ್ಟಂಪಿಂಗ್‌ನಲ್ಲಿ ಎಂಎಸ್ ಧೋನಿ ಮಿಂಚು, ವಿಡಿಯೋ ವೈರಲ್!

ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಎಂಎಸ್ ಧೋನಿ ಮಾಡಿದ್ದ ಮಿಂಚಿನ ಸ್ಟಂಪಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
ಎಂಎಸ್ ಧೋನಿ
ಎಂಎಸ್ ಧೋನಿ
ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಎಂಎಸ್ ಧೋನಿ ಮಾಡಿದ್ದ ಮಿಂಚಿನ ಸ್ಟಂಪಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ಚಾಣಾಕ್ಷತೆ ತೋರಿ ನ್ಯೂಜಿಲ್ಯಾಂಡ್ ತಂಡದ ಆಟಗಾರ ಟಿಮ್ ಸಿಫೇರ್ಟ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
43 ಬಾರಿಸಿದ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸಿಫೇರ್ಟ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಬಿರುಸಿನ ಹೊಡೆತ ಹೊಡೆಯಲು ಮುಂದಕ್ಕೆ ಹೋಗಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ಮಿಸ್ ಆಗಿ ಕೀಪರ್ ಧೋನಿ ಕೈ ಸೇರಿತ್ತು. ಕೂಡಲೇ ಧೋನಿ ಸ್ಟಂಪಿಂಗ್ ಮಾಡಿದ್ದರು.
ಕೂಡಲೇ ಅಂಪೈರ್ ಮೂರನೇ ಅಂಪೈರ್ ಗೆ ರವಾನಿಸಿದ್ದು ದೃಶ್ಯಗಳನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com