ಪಿಚ್ ಗೆ ನುಗ್ಗಿ ಕಾಲಿಗೆ ಬಿದ್ದ ಅಭಿಮಾನಿ ಧೋನಿ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಭಿಮಾನಿಯೊಬ್ಬ ಪಿಚ್ ಗೆ ನುಗ್ಗಿದ್ದು ಕಾಲಿಗೆ ಬಿದ್ದಿರುವ ಘಟನೆ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ 20 ಪಂದ್ಯದಲ್ಲಿ ನಡೆದಿದೆ.

Published: 11th February 2019 12:00 PM  |   Last Updated: 11th February 2019 12:29 PM   |  A+A-

MS Dhoni's Reaction When A Fan Invaded The Pitch And Touched His Feet During Third T20I Against New Zealand

ಪಿಚ್ ಗೆ ನುಗ್ಗಿ ಕಾಲಿಗೆ ಬಿದ್ದ ಅಭಿಮಾನಿ ಧೋನಿ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

Posted By : SBV SBV
Source : Online Desk
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಭಿಮಾನಿಯೊಬ್ಬ ಪಿಚ್ ಗೆ ನುಗ್ಗಿದ್ದು ಕಾಲಿಗೆ ಬಿದ್ದಿರುವ ಘಟನೆ  ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ 20 ಪಂದ್ಯದಲ್ಲಿ ನಡೆದಿದೆ. 

ಭದ್ರತಾ ಕೋಟೆಯನ್ನು ಭೇದಿಸಿ ಮೈದಾನ ಪ್ರವೇಶಿಸಿದ ಅಭಿಮಾನಿ, ಮಹೇಂದ್ರ ಸಿಂಗ್ ಧೋನಿ ಅವರ ಕಾಲಿಗೆ ಬಿದ್ದಿದ್ದಾರೆ. ಈ ವೇಳೆ ಅಭಿಮಾನಿಯ ಕೈಲಿದ್ದ ತ್ರಿವರ್ಣ ಧ್ವಜ ಕೆಳಗುರುಳಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಧೋನಿ, ಅಭಿಮಾನಿಯ ಕೈಯಿಂದ ಬಾವುಟವನ್ನು ಪಡೆದು ಸುರಕ್ಷಿತವಾಗಿ ತಲುಪಿಸಿದರು, ಈ ಮೂಲಕ ಎಂಎಸ್ ಧೋನಿ ದೇಶಪ್ರೇಮವನ್ನು ಮೆರೆದಿದ್ದಾರೆ. 

ಈ ಹಿಂದೆಯೂ ಸಹ ಎಂಎಸ್ ಧೋನಿಗೆ ಇಂತಹ ಸಂದರ್ಭಗಳು ಎದುರಾಗಿದ್ದು, ಅಭಿಮಾನಿಗಳು ಧೋನಿಯನ್ನು ನೋಡಲು ಪಿಚ್ ಗೆ ನುಗ್ಗಿದ ಘಟನೆಗಳು ನಡೆದಿದೆ. ಪ್ರತಿ ಬಾರಿಯೂ ಧೋನಿ ಶಾಂತಿ ಸಂಯಮದಿಂದ ವರ್ತಿಸಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp