ವಿಶ್ವಕಪ್‌ಗೆ ರಿಷಬ್ ಪಂತ್, ಅಜಿಂಕ್ಯ ರಹಾನೆ ಆಯ್ಕೆ ಕಗ್ಗಂಟಾಗಿದೆ: ಎಂಎಸ್ ಕೆ ಪ್ರಸಾದ್

ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಳಗದಲ್ಲಿ ರಿಷಬ್ ಪಂತ್ ಹಾಗೂ ಅಜಿಂಕ್ಯ ರಹಾನೆ ಆಯ್ಕೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್...
ರಿಷಬ್ ಪಂತ್-ಅಂಜಿಕ್ಯ ರಹಾನೆ
ರಿಷಬ್ ಪಂತ್-ಅಂಜಿಕ್ಯ ರಹಾನೆ
ಲಂಡನ್: ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಳಗದಲ್ಲಿ ರಿಷಬ್ ಪಂತ್ ಹಾಗೂ ಅಜಿಂಕ್ಯ ರಹಾನೆ ಆಯ್ಕೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ. 
ಅಜಿಂಕ್ಯ ರಹಾನೆ ಅತ್ಯುತ್ತಮ ಆಟಗಾರ. ಆದರೆ ಕಳೆದ ಒಂದು ವರ್ಷದಿಂದ ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಅವರ ಆಯ್ಕೆ ನಮಗೆ ಆರೋಗ್ಯಕರ ತಲೆ ನೋವಾಗಿ ಪರಿಣಮಿಸಿದೆ ಎಂದರು.
ಇನ್ನು ಕ್ರಿಕೆಟ್ ಎ ನಲ್ಲಿ ಅಜಿಂಕ್ಯ ರಹಾನೆ ಉತ್ತಮವಾಗಿ ಆಡುತ್ತಿದ್ದಾರೆ. ಕಳೆದ 11 ಇನ್ನಿಂಗ್ಸ್ 74.62ರ ಸರಾಸರಿಯಲ್ಲಿ 597 ರನ್ ಪೇರಿಸಿದ್ದಾರೆ. ಹೀಗಾಗಿ ನಮಗೆ ವಿಶ್ವಕಪ್ ನಲ್ಲಿ ಆಡುವ ಸೂಕ್ತ ಆಟಗಾರನ ಅವಶ್ಯಕತೆ ಇದೆ. ಸದ್ಯ ಉಭಯ ಆಟಗಾರರು ಉತ್ತಮವಾಗಿ ಆಡುತ್ತಿರುವುದು ನಮಗೆ ತಲೆನೋವಾಗಿ ಪರಿಣಮಿಸಿದೆ ಎಂದರು.
2019ರ ಐಸಿಸಿ ವಿಶ್ವಕಪ್ ಮೇ 30ರಿಂದ ಜೂನ್ 14ರವರೆಗೆ ನಡೆಯಲಿದ್ದು ಇಂಗ್ಲೆಂಡ್ ಆತಿಥ್ಯ ವಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com