ಎಂ ಎಸ್ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರ ಉಘೇ.. ಉಘೇ...!

ಟೀಮ್​ ಇಂಡಿಯ ಮಾಜಿ ನಾಯಕ​ ಹಾಗೂ ವಿಕೆಟ್​ ಕೀಪರ್​ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರು ಫುಲ್ ಫಿದಾ ಆಗಿದ್ದು, ತ್ರಿವರ್ಣ ಧ್ವಜ ಗೌರವ ಕಾಪಾಡಿದ ಧೋನಿ ಕಾರ್ಯಕ್ಕೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ತ್ರಿವರ್ಣ ಧ್ವಜ ತೆಗೆದು ಕೊಂಡ ಧೋನಿ
ತ್ರಿವರ್ಣ ಧ್ವಜ ತೆಗೆದು ಕೊಂಡ ಧೋನಿ
ಹ್ಯಾಮಿಲ್ಟನ್​: ಟೀಮ್​ ಇಂಡಿಯ ಮಾಜಿ ನಾಯಕ​ ಹಾಗೂ ವಿಕೆಟ್​ ಕೀಪರ್​ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರು ಫುಲ್ ಫಿದಾ ಆಗಿದ್ದು, ತ್ರಿವರ್ಣ ಧ್ವಜ ಗೌರವ ಕಾಪಾಡಿದ ಧೋನಿ ಕಾರ್ಯಕ್ಕೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಭಾನುವಾರ ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನಲ್ಲಿ ಕಿವೀಸ್ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ 4 ರನ್ ಗಳ ವೀರೋಚಿತ ಸೋಲನುಭವಿಸಿತು. ಆದರೆ, ಈ ಪಂದ್ಯದಲ್ಲಿ ನಡೆದ ಒಂದು ಘಟನೆಯಿಂದ ಮಹೇಂದ್ರ ಸಿಂಗ್ ಕೇವಲ ಕ್ರಿಕೆಟ್ ಅಭಿಮಾನಿಗಳ ಮನ ಮಾತ್ರವಲ್ಲದೇ ಇಡೀ ದೇಶದ ಜನತೆಯ ಮನಸು ಗೆದ್ದಿದ್ದಾರೆ.
ಪಂದ್ಯದ ವೇಳೆ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿದ್ದ ಭದ್ರತೆಯನ್ನೂ ಲೆಕ್ಕಿಸದೆ ಮೈದಾನಕ್ಕೆ ನುಗ್ಗಿದ್ದ. ಧೋನಿ ಹತ್ತಿರ ಧಾವಿಸಿದ ಆತ ತನ್ನ ನೆಚ್ಚಿನ ಆಟಗಾರನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದ. ಆದರೆ ಅಭಿಮಾನದ ಭರದಲ್ಲಿ ಆತ ತನ್ನ ಕೈಯಲ್ಲಿದ್ದ ತ್ರಿವರ್ಣ ಧ್ವಜದ ಸಮೇತ ಧೋನಿ ಕಾಲಿಗೆರಗಿದೆ. ಇದನ್ನು ಗಮನಿಸಿದ ಧೋನಿ ಕೂಡಲೇ ಆತನ ಕೈಯಿಂದ ತ್ರಿವರ್ಣ ಧ್ವಜವನ್ನು ಕಿತ್ತುಕೊಂಡರು. ಆ ಮೂಲತ ಧ್ವಜ ಗೌರವ ಕಾಪಾಡಿದರು. ಬಳಿಕ ಭದ್ರತಾ ಅಧಿಕಾರಿಗಳ ಕೈಗೆ ತ್ರಿವರ್ಣ ಧ್ವಜ ನೀಡಿದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನ ನೋಡಿದ ಧೋನಿ ಅಭಿಮಾನಿಗಳು, ಮಾಹಿಯ ದೇಶಾಭಿಮಾನಕ್ಕೆ ಶಹಬ್ಬಾಸ್ ಎಂದಿದ್ದಾರೆ. ಅಲ್ಲದೆ ಧೋನಿ ಕಾರ್ಯಕ್ಕೆ ಟ್ವಿಟರ್ ನಲ್ಲಿ ಪ್ರಶಂಸೆಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com