ನನ್ನಲ್ಲಿ ಇನ್ನೂ ಹೆಚ್ಚಿನ ಆಟದ ಸಾಮರ್ಥ್ಯವಿದೆ: ಚೇತೇಶ್ವರ ಪೂಜಾರ!

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಗೆ ಆಪತ್ಭಾಂಧವನಾಗಿರುವ ಚೇತೇಶ್ವರ ಪೂಜಾರ ಅವರು ಈ ಜಗತ್ತಿಗೆ ಇನ್ನೂ ಹೆಚ್ಚಿನದನ್ನು ತೋರಿಸುವ ಕೌಶಲ್ಯ ನನ್ನಲ್ಲಿದೆ ಎಂದು ಹೇಳಿದ್ದಾರೆ.

Published: 12th February 2019 12:00 PM  |   Last Updated: 12th February 2019 03:03 AM   |  A+A-


Cheteshwar Pujara

ಚೇತೇಶ್ವರ ಪೂಜಾರ

Posted By : VS VS
Source : Online Desk
ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಗೆ ಆಪತ್ಭಾಂಧವನಾಗಿರುವ ಚೇತೇಶ್ವರ ಪೂಜಾರ ಅವರು ಈ ಜಗತ್ತಿಗೆ ಇನ್ನೂ ಹೆಚ್ಚಿನದನ್ನು ತೋರಿಸುವ ಕೌಶಲ್ಯ ನನ್ನಲ್ಲಿದೆ ಎಂದು ಹೇಳಿದ್ದಾರೆ. 

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ 2-1ರ ಅಂತರದಿಂದ ಗೆಲುವು ಸಾಧಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಈ ಸರಣಿ ಗೆಲುವಿನ ಹಿಂದೆ ಪೂಜಾರರ ಶ್ರಮ ಸಾಕಷ್ಟಿತ್ತು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಪೂಜಾರ 521 ರನ್ ಪೇರಿಸಿದ್ದು ಮೂರು ಶತಕ ಸೇರಿದ್ದವು. 

ಅತ್ಯುತ್ತಮವಾಗಿ ಆಡಿದ್ದರು ಸಹ ಪೂಜಾರರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಇಲೆವೆನ್ ತಂಡದಿಂದ ಕೈಬಿಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ಪೂಜಾರ ಹೌದು ನನ್ನು ಇತ್ತೀಚಿನ ಬ್ಯಾಟಿಂಗ್ ಕೌಶಲ್ಯ ಕಡಿಮೆಯಾಗಿದೆ. ಆದರೆ ಇದಕ್ಕಾಗಿ ಕಠಿಣ ತರಭೇತಿ ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಜಗತ್ತಿಗೆ ನನ್ನಲ್ಲಿನ ಸಾಮರ್ಥ್ಯವನ್ನು ಇನ್ನಷ್ಟು ತೋರಿಸುವ ಹಂಬವಿದೆ ಎಂದರು.

ಇತ್ತೀಚಿಗೆ ನಡೆದ ರಣಜಿ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮರೆತು ಬ್ಯಾಟಿಂಗ್ ಮಾಡಿದ್ದ ಪೂಜಾರ ವಿರುದ್ಧ ಅಭಿಮಾನಿಗಳು ಮುನಿಸಿಕೊಂಡಿದ್ದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp