ಐಸಿಸಿ ಟಿ-20 ರ‍್ಯಾಂಕಿಂಗ್‌ : ಜೆಮಿಮಾ ರಾಡ್ರಿಗಸ್ ನಂಬರ್ 2, ಸ್ಮೃತಿ ಮಂಧಾನ ಆರನೇ ಸ್ಥಾನಕ್ಕೆ ಜಿಗಿತ

ರಾಡ್ರಿಗಸ್ ಹಾಗೂ ಸ್ಮೃತಿ ಮಂಧಾನ ಐಸಿಸಿ ಟಿ-20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಕ್ರಮವಾಗಿ ನಂಬರ್ 2 ಹಾಗೂ ಆರನೇ ಸ್ಥಾನವನ್ನು ಆಲಂಕರಿಸಿದ್ದಾರೆ.

Published: 12th February 2019 12:00 PM  |   Last Updated: 12th February 2019 08:53 AM   |  A+A-


Smirti Mandhana

ಸ್ಮೃತಿ ಮಂಧಾನ

Posted By : ABN ABN
Source : The New Indian Express
ದುಬೈ: ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ 0-3 ಅಂತರದಿಂದ ವೈಟ್ ವಾಶ್ ಆದರೂ ಟೀಂ ಇಂಡಿಯಾ ಆಟಗಾರ್ತಿಯರಾದ ಜೆಮಿಮಾ ರಾಡ್ರಿಗಸ್ ಹಾಗೂ ಸ್ಮೃತಿ ಮಂಧಾನ ಐಸಿಸಿ ಟಿ-20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ  ನಾಲ್ಕು ಸ್ಥಾನ ಜಿಗಿತ ಕಂಡಿದ್ದು, ಕ್ರಮವಾಗಿ ನಂಬರ್ 2 ಹಾಗೂ ಆರನೇ ಸ್ಥಾನವನ್ನು ಆಲಂಕರಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ 132 ರನ್ ಗಳಿಸಿದ್ದ ರಾಡ್ರಿಗಸ್  ನಂಬರ್ 2 ಸ್ಥಾನದಲ್ಲಿದ್ದರೆ, ಸ್ಮೃತಿ ಮಂಧಾನ ನಾಲ್ಕು ಸ್ಥಾನ ಮೇಲಕ್ಕೇರಿದ್ದು, ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಎಡಗೈ ಬ್ಯಾಟ್ಸ್ ಮನ್ ಆಗಿರುವ ಸ್ಮೃತಿ ಮಂಧಾನ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅಗ್ರ ಸ್ಥಾನ ಹೊಂದಿದ್ದಾರೆ.

ಈ ಸರಣಿಯಲ್ಲಿ ನಾಲ್ಕು ವಿಕೆಟ್ ಗಳಿಸಿದ ಸ್ಪೀನ್ನರ್ ರಾಧಾ ಯಾದವ್ 18 ನೇ ಸ್ಥಾನದಿಂದ 10 ಹಾಗೂ ದೀಪ್ತಿ ಶರ್ಮಾ 14ರಿಂದ 5 ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಈ ಮಧ್ಯೆ ನ್ಯೂಜಿಲ್ಯಾಂಡಿನ ಸುಜಯ್ ಬ್ಯಾಟ್ಸ್ ಅಗ್ರ ಸ್ಥಾನ ಹೊಂದಿದ್ದರೆ, ಕ್ಯಾಪ್ಟನ್ ಆಮಿ ಸಟ್ಟರ್ವೈಟ್ 23 ರಿಂದ 17ಕ್ಕೆ ಸ್ಥಾನ ಮೇಲಕ್ಕೇರಿದ್ದಾರೆ. ಸೊಪೈ ದೆವೈನ್  11ರಿಂದ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಲಿಯಾ ತಾಹುಹು 11ನೇ ಸ್ಥಾನದಿಂದ ನಂಬರ್ 5 ಸ್ಥಾನಕ್ಕೇರಿದ್ದಾರೆ.ಆಲ್ ರೌಂಡರ್ ವಿಭಾಗದಲ್ಲಿ ಡೀನ್ ಡ್ರಾ ಡೊಟ್ಟಿನ್ ನಂಬರ್ 1 ಸ್ಥಾನದಲ್ಲಿದ್ದಾರೆ.

ತಂಡಗಳ ರ‍್ಯಾಂಕಿಂಗ್‌: ಆಸ್ಟ್ರೇಲಿಯಾ ನಂಬರ್ 1, ನ್ಯೂಜಿಲ್ಯಾಂಡ್ ನಂ-2 ಸ್ಥಾನದಲ್ಲಿದೆ. ಇಂಗ್ಲೆಂಡ್ ನಂಬರ್ 3 ಹಾಗೂ ಭಾರತ 4 , ವೆಸ್ಟ್ ಇಂಡೀಸ್ 5 ಸ್ಥಾನದಲ್ಲಿವೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp