ಅಂಪೈರ್‌ಗೂ ಹೆಲ್ಮೆಟ್ ಬೇಕೆ ಬೇಕು, ಇಲ್ಲದ್ದಿದ್ದರೆ ಹೀಗೆ ಆಗೋದು; ವಿಡಿಯೋ ವೈರಲ್!

ಕ್ರಿಕೆಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮಾತ್ರ ಹೆಲ್ಮೆಟ್ ಹಾಕಿಕೊಂಡರೆ ಸಾಲದು. ಅಂಪೈರ್‌ಗಳು ಸಹ ಹೆಲ್ಮೆಟ್ ಬಳಸುವುದು ಸೂಕ್ತ ಇಲ್ಲದಿದ್ದರೆ ಹೀಗೆ ಆಗೋದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕ್ರಿಕೆಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮಾತ್ರ ಹೆಲ್ಮೆಟ್ ಹಾಕಿಕೊಂಡರೆ ಸಾಲದು. ಅಂಪೈರ್‌ಗಳು ಸಹ ಹೆಲ್ಮೆಟ್ ಬಳಸುವುದು ಸೂಕ್ತ ಇಲ್ಲದಿದ್ದರೆ ಹೀಗೆ ಆಗೋದು.
ಹೌದು. ಇರಾನಿ ಕಪ್ ಟೂರ್ನಿಯ ವೇಳೆ ಅಂಪೈರಿಂಗ್ ಮಾಡುತ್ತಿದ್ದ ನಂದನ್ ಎಂಬುವರಿಗೆ ಫೀಲ್ಡರ್ ಎಸೆತ ಚೆಂಡು ತಲೆಗೆ ಬಿದ್ದಿದ್ದು ಪರಿಣಾಮ ಅಂಪೈರ್ ಮೈದಾನದಲ್ಲೇ ಕುಸಿದು ಬಿದ್ದರು. 
ಕೆಳಗೆ ಬಿದ್ದ ನಂದನ್ ಅವರು ತೀವ್ರ ನೋವಿನಿಂದಾಗಿ ತಲೆಯನ್ನು ಉಜ್ಜಿಕೊಳ್ಳುತ್ತಿದ್ದರು. ಈ ವೇಳೆ ಮೈದಾನದಲ್ಲಿದ್ದ ಫೀಲ್ಡರ್ ಗಳು ಕೂಡಲೇ ಅವರ ನೆರವಿಗೆ ಬಂದರು. ಬಳಿಕ ಬಂದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿತು. 
ನಂತರ ನಂದನ್ ಅವರು ಎದ್ದು ನಗುಮುಖದೊಂದಿಗೆ ಅಂಪೈರಿಂಗ್ ಮಾಡಿದರು. ರೆಸ್ಟ್ ಆಫ್ ಇಂಡಿಯಾ ಹಾಗೂ ವಿದರ್ಭ ನಡುವಿನ ಪಂದ್ಯದ ನಡುವೆ ಈ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com