ಪುಲ್ವಾಮಾ ದಾಳಿ: ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್ಎಲ್) ಮೇಲೆ ಐಎಂಜಿ-ರಿಲಯನ್ಸ್ ಸರ್ಜಿಕಲ್ ಸ್ಟ್ರೈಕ್!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಹೊಡೆತ ತಿನ್ನುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಾಹೋರ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಹೊಡೆತ ತಿನ್ನುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಭಾರತದಲ್ಲಿ ಪ್ರಸಾರ ನಿರ್ಬಂಧಿಸಿದ ಬೆನ್ನಲ್ಲೇ ಟೂರ್ನಿಯ ನಿರ್ಮಾಣ ಒಪ್ಪಂದಿಂದ ಐಎಂಜಿ ರಿಲಯನ್ಸ್ ಹಿಂದೆ ಸರಿದಿದೆ.
ಪಿಎಸ್ಎಲ್ ಟೂರ್ನಿಯ ಪ್ರಸಾರದ ಸಂಪೂರ್ಣ ಜವಾಬ್ದಾರಿ ಐಎಂಜಿ ರಿಲಯನ್ಸ್ ಕೈಯಲ್ಲಿತ್ತು. ಆದರೆ ಪುಲ್ವಾಮಾ ದಾಳಿ ಬಳಿಕ ನಿರ್ಮಾಣದಿಂದ ಐಎಂಜಿ ರಿಲಯನ್ಸ್ ಹೊರಬಂದಿದೆ. ಇದರಿಂದ ಹತಾಶೆಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡುವುದಾಗಿ ಹೇಳಿದೆ. ಇಷ್ಟೇ ಅಲ್ಲ ರಾಜಕೀಯ ಹಾಗೂ ಕ್ರೀಡೆಯನ್ನು ಒಂದೇ ತಕ್ಕಡಿಯಲ್ಲಿ ನೋಡಬಾರದು ಎಂದಿದೆ. 
ಹೊಸ ಬ್ರಾಡ್ ಕಾಸ್ಟ್ ಪ್ರೊಡಕ್ಷನ್ ಒಪ್ಪಂದವನ್ನು ಸೋಮವಾರ ಘೋಷಿಸುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಭಾರತದ ನಡೆ ಅಚ್ಚರಿ ತಂದಿದೆ. ಪಾಕ್ ಕ್ರಿಕೆಟಿಗರ ಫೋಟೋ ತೆರವು, ಪಾಕಿಸ್ತಾನ ಕ್ರಿಕೆಟ್ ಲೀಗ್ ಪ್ರಸಾರ ನಿರ್ಬಂಧ ಎರಡು ದೇಶದ ಅಂತರವನ್ನು ಹೆಚ್ಚಿಸಲಿದೆ ಎಂದು ಪಿಸಿಬಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com