ಐಪಿಎಲ್ ಅದ್ಧೂರಿ ಉದ್ಘಾಟನೆ ಇಲ್ಲ; ವೆಚ್ಚದ ಹಣ ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ಅರ್ಪಣೆ!

ಶ್ರೀಮಂತ ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಐಪಿಎಲ್ ಅದ್ಧೂರಿ ಉದ್ಘಾಟನೆಗೆ ಬ್ರೇಕ್ ಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಶ್ರೀಮಂತ ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಐಪಿಎಲ್ ಅದ್ಧೂರಿ ಉದ್ಘಾಟನೆಗೆ ಬ್ರೇಕ್ ಹಾಕಿದ್ದು ಅದಕ್ಕೆ ವೆಚ್ಚವಾಗುವ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಕುಟುಂಬಕ್ಕೆ ನೀಡಲು ತೀರ್ಮಾನಿಸಿದೆ. 
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಹಾಗೂ ಚೆನ್ನೈ ನಡುವೆ ನಡೆಯಲಿದೆ. ಇದಕ್ಕೂ ಮುನ್ನ ನಡೆಯಬೇಕಿದ್ದ ಸಮಾರಂಭ ರದ್ದಾಗಿದೆ ಈ ಕುರಿತು ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಮಾಹಿತಿ ನೀಡಿದ್ದು ಯೋಧರ ಕುಟುಂಬಗಳಿಗೆ ನೀಡುವ ಮೂಲಕ ಹಣವನ್ನು ಸದುಪಯೋಗ ಮಾಡುವ ನಿರ್ಧಾರ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 
ಇನ್ನು ಪುಲ್ವಾಮಾ ದಾಳಿಯಿಂದ ವಿಶ್ವಕಪ್ ಪಂದ್ಯ ಆಡಬೇಕಾ ಬೇಡವಾ ಎಂಬುವುದರ ನಡುವೇ ಯೋಧರ ನೆರವಿಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2018ರ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಬಿಸಿಸಿಐ 20 ಕೋಟಿ ರುಪಾಯಿ ಹಣವನ್ನು ಮೀಸಲಿಟ್ಟಿತ್ತು.
ಮೊದಲಿಗೆ ಎರಡು ವಾರಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಮುಂದಿನ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಬಿಡುಗಡೆ ಆಗಿರುವ ವೇಳಾಪಟ್ಟಿಯ ಅನ್ವಯ 17 ಪಂದ್ಯಗಳ ದಿನಾಂಕ ನಿಗದಿ ಆಗಿದ್ದು ಮಾರ್ಚ್ 23ರಿಂದ ಏಪ್ರಿಲ್ 5ರವರೆಗೂ ಪಂದ್ಯಗಳು ನಡೆಯಲಿದೆ. ಮಾರ್ಚ್ 24, 30 ಮತ್ತು 31ರಂದು ಎರಡು ಪಂದ್ಯಗಳು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com