ಕ್ರಿಕೆಟ್ ವಿಶ್ವಕಪ್ 2019: ದಾದಾ ಪ್ರಕಾರ ಇದು ಅವರ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ!

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪ್ರಕಾರ ಈ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಡವಂತೆ. ಇಷ್ಟಕ್ಕೂ ಯಾವುದು ಆ ತಂಡ ಗೊತ್ತಾ..?

Published: 22nd February 2019 12:00 PM  |   Last Updated: 22nd February 2019 02:38 AM   |  A+A-


Sourav Ganguly picks India as favourites to win World Cup

ಸಂಗ್ರಹ ಚಿತ್ರ

Posted By : SVN SVN
Source : The New Indian Express
ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪ್ರಕಾರ ಈ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಡವಂತೆ. ಇಷ್ಟಕ್ಕೂ ಯಾವುದು ಆ ತಂಡ ಗೊತ್ತಾ..?

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪ್ರಕಾರ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲ್ಲುವ ಫೇವರಿಟ್ ತಂಡವಂತೆ. ಇದಕ್ಕೆ ಕಾರಣವನ್ನೂ ನೀಡಿರುವ ಗಂಗೂಲಿ, ಕಳೆದ 6-7 ತಿಂಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈ ಮೂಲಕ ಉತ್ತಮ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದೆ. ಈಗಿನ ಭಾರತ ತಂಡವನ್ನು ಅತ್ಯುತ್ತಮ ತಂಡ. ಅಲ್ಲದೆ ಎಲ್ಲ ಆಟಗಾರರು ಉತ್ತಮ ನಿರ್ವಹಣೆ ನೀಡಿದ್ದು, ಉತ್ತಮ ಫಾರ್ಮ್ ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ನಿನ್ನೆಯಷ್ಟೇ ಪುಲ್ವಾಮ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಗಂಗೂಲಿ, ಪಾಕಿಸ್ತಾನ ಜತೆಗಿನ ಕ್ರಿಕೆಟ್ ಬಾಂಧವ್ಯವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನಲ್ಲಿ ಆಡಕೂಡದು ಎಂದೂ ಆಗ್ರಹಿಸಿದ್ದ ಗಂಗೂಲಿ, ಕೇವಲ ಕ್ರಿಕೆಟ್ ಮಾತ್ರವಲ್ಲದೇ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಕ್ರೀಡಾ ಬಾಂಧವ್ಯ ಹೊಂದಬಾರದು ಎಂದು ಹೇಳಿದ್ದರು.
Stay up to date on all the latest ಕ್ರಿಕೆಟ್ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp