ಮೊದಲ ಟಿ-20 ಪಂದ್ಯ: ಆಸ್ಟ್ರೇಲಿಯಾಕ್ಕೆ 127 ರನ್ ಗಳ ಟಾರ್ಗೆಟ್ ನೀಡಿದ ಭಾರತ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ 127 ರನ್ ಗಳ ಟಾರ್ಗೆಟ್ ನೀಡಿದೆ.
ಟೀಂ ಇಂಡಿಯಾ ಬ್ಯಾಟಿಂಗ್ ಚಿತ್ರ
ಟೀಂ ಇಂಡಿಯಾ ಬ್ಯಾಟಿಂಗ್ ಚಿತ್ರ
ವಿಶಾಖಪಟ್ಟಣಂ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ  126  ರನ್  ಗಳಿಸಿ ಆಸ್ಟ್ರೇಲಿಯಾಕ್ಕೆ 127 ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ  ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿತು. ಆದರೆ, ಭಾರತ 100 ರನ್ ಆಗುವಷ್ಟರಲ್ಲಿ ಪ್ರಮುಖ  6 ವಿಕೆಟ್ ಕಳೆದುಕೊಂಡು ಆರಂಭಿಕ ಸಂಕಷ್ಟಕ್ಕೊಳಗಾಯಿತು.
ಆರಂಭಿಕ ಆಟಗಾರ  ರೋಹಿತ್ ಶರ್ಮಾ ಕೇವಲ 5 ರನ್  ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 24 ರನ್ ಗಳಿಗೆ ಔಟಾಗುವ ಮೂಲಕ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದರು.  
ಆರ್ ಆರ್ ಪಂತ್ ಕೇವಲ 3 ರನ್ ಗಳಿಗೆ ರನ್ ಔಟ್ ಆದರು. ಕಾರ್ತಿಕ್  ಹಾಗೂ ಕೆಹೆಚ್ ಪಾಂಡ್ಯ ತಲಾ 1 , ಯಾದವ್ 2 ರನ್  ಗಳಿಗೆ ಔಟ್  ಆಗಿ ಫೆವಿಲಿಯನ್ ಪರೇಡ್ ನಡೆಸಿದರು.
ಆರಂಭಿಕ ಆಟಗಾರ ಕೆ. ಎಲ್. ಮತ್ತೆ ಲಯಕ್ಕೆ ಮರಳಿದ್ದು, 36 ಎಸೆತಗಳಲ್ಲಿ 50 ಗಳಿಸಿದರು. ಅವರೊಬ್ಬರನ್ನು ಬಿಟ್ಟರೆ ಉಳಿದ ಯಾವುದೇ ಆಟಗಾರರು ಕ್ರೀಸ್ ನಲ್ಲಿ ನಿಲ್ಲುವಲ್ಲಿ ವಿಫಲರಾದರು.ಮಹೇಂದ್ರ ಸಿಂಗ್  ಕೊನೆಯವರೆಗೂ ಕ್ರೀಸ್ ನಲ್ಲಿ ನಿಲ್ಲುವ ಮೂಲಕ ಭಾರತ 120ರ ಗಡಿ ದಾಟಿಸುವಲ್ಲಿ ನೆರವಾದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com