ಒಂದೇ ಸರಣಿಯಲ್ಲಿ ತ್ರಿಶತಕ ದಾಖಲೆ: ಟೀಂ ಇಂಡಿಯಾಗೆ ಆಪತ್ಬಾಂಧವನಾಗಿ ನಿಂತ ಪೂಜಾರ!

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ನಂತರ ಇದೀಗ ಟೀಂ ಇಂಡಿಯಾಗೆ 'ದಿ ವಾಲ್' ಆಗಿರುವ ಚೇತೇಶ್ವರ ಪೂಜಾರ ಅವರು ಒಂದೇ ಸರಣಿಯಲ್ಲಿ ತ್ರಿಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ
ಸಿಡ್ನಿ: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ನಂತರ ಇದೀಗ ಟೀಂ ಇಂಡಿಯಾಗೆ 'ದಿ ವಾಲ್' ಆಗಿರುವ ಚೇತೇಶ್ವರ ಪೂಜಾರ ಅವರು ಒಂದೇ ಸರಣಿಯಲ್ಲಿ ತ್ರಿಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ. 
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಅವರು 119 ಎಸೆತಗಳಲ್ಲಿ 13 ಬೌಂಡರಿ ಸೇರಿ ಶತಕ ಪೂರೈಸಿದ್ದರು. ಅಡಿಲೇಡ್, ಮೆಲ್ಬರ್ನ್ ಬಳಿಕ ಇದೀಗ ಸಿಡ್ನಿಯಲ್ಲೂ ಪೂಜಾರ ಶತಕ ಸಿಡಿಸಿದ್ದಾರೆ. ಇದು ಪೂಜಾರರ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 18ನೇ ಶತಕವಾಗಿದೆ.
ಈ ಶತಕದ ಮೂಲಕ ಪೂಜಾರ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್ ಹಾಗೂ ದಿಲೀಪ್ ವೆಂಗಸರ್ಕಾರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ತಮ್ಮ 68ನೇ ಟೆಸ್ಟ್ ಪಂದ್ಯದ 114ನೇ ಇನ್ನಿಂಗ್ಸ್ ನಲ್ಲಿ ಪುಜಾರ 18ನೇ ಶತಕವನ್ನು ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com