ಪೂಜಾರ ಮಿಸ್ ದ ಚಾನ್ಸ್! ಕೇವಲ 2 ರನ್‌ನಿಂದ ಸೆಹ್ವಾಗ್ ದಾಖಲೆ ಮಿಸ್, ಆ ದಾಖಲೆ ಯಾವುದು ಗೊತ್ತಾ?

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರ ಅವರು ಕೇವಲ 2 ರನ್‌ನಿಂದ ಮಾಜಿ...
ವೀರೇಂದ್ರ ಸೆಹ್ವಾಗ್-ಚೇತೇಶ್ವರ ಪೂಜಾರ
ವೀರೇಂದ್ರ ಸೆಹ್ವಾಗ್-ಚೇತೇಶ್ವರ ಪೂಜಾರ
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರ ಅವರು ಕೇವಲ 2 ರನ್‌ನಿಂದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿಯೋದು ಮಿಸ್ ಮಾಡಿದ್ದಾರೆ.
ಹೌದು ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ 173 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ 6ನೇ ಆಟಗಾರ ಎಂಬ ಖ್ಯಾತಿಗೆ ಪೂಜಾರ ಭಾಜನರಾಗಿದ್ದಾರೆ. ಆದರೆ ಕೇವಲ 2 ರನ್ ನಿಂದ ಸೆಹ್ವಾಗ್ ದಾಖಲೆ ಮುರಿಯೋದನ್ನು ಮಿಸ್ ಮಾಡಿಕೊಂಡಿದ್ದಾರೆ. 
ಎಸ್ಸಿಜಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 2004ರಲ್ಲಿ ಅಜೇಯ 241 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 2003ರಲ್ಲಿ ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು 233 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. 206 ರನ್ ಗಳಿಸಿರುವ ರೋಹಿತ್ ಶರ್ಮಾ 3ನೇ ಸ್ಥಾನ, ಅಜೇಯ 205 ರನ್ ಗಳಿಸಿರುವ ಅಜರ್ ಅಲಿ 4ನೇ ಸ್ಥಾನ. 195 ರನ್ ಗಳಿಸಿರುವ ವೀರೇಂದ್ರ ಸೆಹ್ವಾಗ್ 5 ಸ್ಥಾನದಲ್ಲಿದ್ದಾರೆ.
ಒಟ್ಟಿನಲ್ಲಿ ದ್ವಿಶತಕ ಸಿಡಿಸುವ ಅವಕಾಶವನ್ನು ಕೈತಪ್ಪಿದ ಬೆನ್ನಲ್ಲೇ ಇದೀಗ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿಯುವಲ್ಲಿ ಚೇತೇಶ್ವರ ಪೂಜಾರ ಎಡವಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com