4ನೇ ಟೆಸ್ಟ್: ದ್ವಿಶತಕದತ್ತ ಪೂಜಾರ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ಪ್ರಮುಖವಾಗಿ 2ನೇ ದಿನವೂ ಆಸ್ಟ್ರೇಲಿಯನ್ನರಿಗೆ ಚೇತೇಶ್ವರ ಪೂಜಾರ ದುಃಸ್ವಪ್ನವಾಗಿ ಕಾಡುತ್ತಿದ್ದು, ಈಗಾಗಲೇ 184 ರನ್ ಗಳಿಸಿರುವ ಪೂಜಾರ ದ್ವಿಶತಕದತ್ತ ದಾಪುಗಾಲಿರಿಸಿದ್ದಾರೆ. ಇನ್ನು ಪೂಜಾರಗೆ ರಿಷಬ್ ಪಂತ್ ಉತ್ತಮ ಸಾಥ್ ನೀಡುತ್ತಿದ್ದಾರೆ.
ನಿನ್ನೆ 3030 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು 2ನೇ ದಿನದಾಟ ಮುಂದುವರೆಸಿತು. ಮೊದಲ ದಿನದಾಟದ ಅಂತ್ಯಕ್ಕೆ ಪೂಜಾರ ಅಜೇಯ 130 ರನ್ ಗಳಿಸಿ ಮತ್ತು ಹನುಮವಿಹಾರಿ 39 ರನ್ ಗಳಿಸಿ 2ನಮೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಇಂದು 2ನೇ ದಿನದಾಟ ಆರಂಭಿಸಿದ ಈ ಜೋಡಿಯನ್ನು ಲಿಯಾನ್ ಬೇರ್ಪಡಿಸಿದರು. ಇದೀಗ ಪೂಜಾರ ಜೊತೆಗೂಡಿರುವ ರಿಷಬ್ ಪಂತ್ ಅರ್ಧಶತಕದ ಹೊಸ್ತಿಲಲ್ಲಿದ್ದು, ಪೂಜಾರ ದ್ವಿಶತಕದತ್ತ ದಾಪುಗಾಲಿರಿಸಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದ್ದು, ಪೂಜಾರ 187 ರನ್ ಗಳಿಸಿದ್ದು, ಪಂತ್ 37 ರನ್ ಗಳಿಸಿ ಆಟವಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com