71.05 ಸರಾಸರಿಯಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಜಡೇಜಾ 81 ರನ್ ಕಲೆಹಾಕಿದರೆ, ಅತ್ತ ಪಂತ್ ಕೂಡ 84.13 ಸರಾಸರಿಯಲ್ಲಿ 15 ಬೌಂಡರಿ ಹಾಗೂ 1ಸಿಕ್ಸರ್ ಸೇರಿದಂತೆ ಅಜೇಯ 159 ರನ್ ಪೇರಿಸಿದರು. ಅಂತೆಯೇ ಈ ಜೋಡಿ ಈ ಹಿಂದೆ ಪೂಜಾರ ಮತ್ತು ಸಾಹಾ ಅವರ ಹೆಸರಿನಲ್ಲಿದ್ದ 199 ರನ್ ಗಳ ಜೊತೆಯಾಟದ ದಾಖಲೆಯನ್ನು ಹಿಂದಿಕ್ಕಿದೆ. 2017ರಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ 7ನೇ ವಿಕೆಟ್ ಜೊತೆಯಾಟದಲ್ಲಿ ಪೂಜಾರ ಮತ್ತು ಸಾಹಾ ಜೋಡಿ 199ರನ್ ಪೇರಿಸಿತ್ತು.