ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ; ಈ ಬಾರಿ ಗ್ಲೌಸ್ ನಿಂದಲ್ಲ, ಬದಲಿಗೆ ಬ್ಯಾಟ್ ನಿಂದ!

ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.
ಶತಕ ಸಂಭ್ರಮದಲ್ಲಿ ಪಂತ್
ಶತಕ ಸಂಭ್ರಮದಲ್ಲಿ ಪಂತ್
ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.
ಹೌದು ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅಮೋಘ ಬ್ಯಾಟಿಂಗ್ ಮಾಡಿ ಆಕರ್ಷಕ ಶತಕ ಸಿಡಿಸಿದ್ದಾರೆ. 165 ಎಸೆತಗಳನ್ನು ಎದುರಿಸಿರುವ ಪಂತ್ 11 ಬೌಂಡರಿಗಳ ಸಹಾಯದಿಂದ 128 ರನ್ ಗಳಿಸಿದ್ದು, ಆ ಮೂಲಕ ರಿಷಬ್ ಪಂತ್ ಆಸಿಸ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಆಸಿಸ್ ನೆಲದಲ್ಲಿ ಸಾಕಷ್ಟು ವಿಕೆಟ್ ಕೀಪರ್ ಗಳು ಶತಕ ಸಿಡಿಸಿದ್ದಾರೆಯಾದರೂ, ಭಾರತ ತಂಡದ ವತಿಯಿಂದ ವಿಕೆಟ್ ಕೀಪರ್ ಶತಕ ಸಿಡಿಸಿದ ಸಾಧನೆ ಮಾಡಿರಲಿಲ್ಲ.
ಇದೀಗ ಈ ದಾಖಲೆಯನ್ನು ಪಂತ್ ಮಾಡಿದ್ದು, ಆಸಿಸ್ ನೆಲದಲ್ಲಿ ಶತಕ ಸಂಭ್ರಮ ಆಚರಿಸಿದ್ದಾರೆ. ಅಂತೆಯೇ ಭಾರತ ಹೊರತು ಪಡಿಸಿ ವಿದೇಶಗಳಲ್ಲಿ ಶತಕ ಸಿಡಿಸಿದ ಲೆಜೆಂಡ್ ಆಟಗಾರರ ಪಟ್ಟಿಗೆ ಪಂತ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು 1959ರಲ್ಲಿ ವಿಂಡೀಸ್ ವಿರುದ್ಧ ವಿ ಮಂಜ್ರೇಕರ್ (118 ರನ್) ಅವರು ಶತಕ ಸಾಧನೆ ಮಾಡಿದ್ದರು.  ಆ ಬಳಿಕ 2002ರಲ್ಲಿ ವಿಂಡೀಸ್ ವಿರುದ್ಧ ಎ ರಾತ್ರಾ (115 ರನ್) ಅವರು ಅಜೇಯ ಶತಕ ಸಿಡಿಸಿದ್ದರು. ಬಳಿಕ 2016ರಲ್ಲಿ ಮತ್ತದೇ ವಿಂಡೀಸ್ ತಂಡದ ವಿರುದ್ಧ ವೃದ್ದಿಮಾನ್ ಸಾಹ (104 ರನ್) ಶತಕ ಸಾಧನೆಗೈದಿದ್ದರು. 
ಆ ಬಳಿಕ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಪಂತ್ (114 ರನ್) ಶತಕ ಸಾಧನೆಗೈದಿದ್ದರು. ಇದೀಗ ಆಸಿಸ್ ನೆಲದಲ್ಲೂ ಪಂತ್ ಶತಕ ಸಾಧನೆ ಗೈದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com