ಧೋನಿ ಆಯ್ತು ಈಗ ಸಚಿನ್ ದಾಖಲೆ ಹಿಂದೆ ಬಿದ್ದ ರಿಷಬ್ ಪಂತ್

ಈ ಹಿಂದೆ ವಿಕೆಟ್ ಕೀಪಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದ ರಿಷಬ್ ಪಂತ್ ಇದೀಗ ಸಚಿನ್ ದಾಖಲೆಯ ಹಿಂದೆ ಬಿದಿದ್ದಾರೆ.
ಪಂತ್ ಆಟದ ಪರಿ
ಪಂತ್ ಆಟದ ಪರಿ
ಸಿಡ್ನಿ: ಈ ಹಿಂದೆ ವಿಕೆಟ್ ಕೀಪಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದ ರಿಷಬ್ ಪಂತ್ ಇದೀಗ ಸಚಿನ್ ದಾಖಲೆಯ ಹಿಂದೆ ಬಿದಿದ್ದಾರೆ.
ಹೌದು.. ಆಸ್ಟ್ರೇಲಿಯಾ ವಿರುದ್ದ ಸಿಡ್ನಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ತಮ್ಮ ಬ್ಯಾಟ್ ಮೂಲಕ ಅಮೋಘ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಶತಕ ಸಿಡಿಸಿದ್ದಾರೆ. ಆ ಮೂಲಕ ಅಪರೂಪದ ದಾಖಲೆಯೊಂದನ್ನು ಪಂತ್ ಬರೆದಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಸಚಿನ್ ಬಳಿಕ ಅತೀ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸಮನ್ ಎಂಬ ಕೀರ್ತಿಗೆ ಪಂತ್ ಭಾಜನರಾಗಿದ್ದಾರೆ.
ಇಂದು ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಪಂತ್ ಅಮೋಘ ಶತಕ ಸಿಡಿಸಿದರು.  7ನೇ ವಿಕೆಟ್ ಗೆ ರವೀಂದ್ರ ಜಡೇಜಾ ಜೊತೆಗೂಡಿದ ಪಂತ್ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 140 ರನ್ ಕಲೆಹಾಕಿದ್ದಾರೆ. ಆ ಮೂಲಕ ಸಚಿನ್ ಬಳಿಕ ಅತಿ ಕಿರಿಯ ವಯಸ್ಸಿನಲ್ಲೇ ಆಸಿಸ್ ನೆಲದಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
1992ರಲ್ಲಿ ಇದೇ ಎಸ್ ಸಿಜಿ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಅಜೇಯ ಶತಕ (148 ರನ್) ಸಿಡಿಸಿದ್ದರು. ಅಂದು ಶತಕ ಸಿಡಿಸಿದ ದಿನಕ್ಕೆ ಸಚಿನ್ ವಯಸ್ಸು 18 ವರ್ಷ 256 ದಿನಗಳಾಗಿತ್ತು. ಆ ಬಳಿಕ ಅದೇ ವರ್ಷ ಅಂದರೆ 1992ರಲ್ಲೇ ಪರ್ತ್ ನಲ್ಲಿ ಮತ್ತೆ ಸಚಿನ್ ಶತಕ () 114ರನ್) ಸಿಡಿಸಿದ್ದರು. ಅಂದು ಸಚಿನ್ ವಯಸ್ಸು 18 ವರ್ಷ 285 ದಿನಗಳಾಗಿತ್ತು.  ಇದಕ್ಕೂ ಮೊದಲು ಅಂದರೆ 1948ರಲ್ಲಿ ಅಡಿಲೇಡ್ ನಲ್ಲಿ ದತ್ತು ಫಾಡ್ಕರ್ ಅವರು ಮೊದಲ ಶತಕ (123 ರನ್) ಸಿಡಿಸಿದ್ದರು. ಅಂದು ಅವರ ವಯಸ್ಸು 22 ವರ್ಷ 46 ದಿನಗಳಾಗಿತ್ತು.
ಇದೀಗ ಪಂತ್ ಸಿಡ್ನಿಯಲ್ಲಿ ಶತಕ ಸಿಡಿಸಿದ್ದು, ಈಗ ಪಂತ್ ವಯಸ್ಸು 21 ವರ್ಷ 92ದಿನಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com