ಹನುಮ ವಿಹಾರಿ ನಾಟೌಟ್ ಆಗಿದ್ದರು 3ನೇ ಅಂಪೈರ್ ಔಟ್ ತೀರ್ಪು: ಟ್ವೀಟರಿಗರಿಂದ ಆಕ್ರೋಶ!

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಹನುಮ ವಿಹಾರಿ ಔಟ್ ತೀರ್ಪು ಕುರಿತಂತೆ ಟ್ವೀಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಹನುಮ ವಿಹಾರಿ ಔಟ್ ತೀರ್ಪು ಕುರಿತಂತೆ ಟ್ವೀಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ನಾಟೌಟ್ ಆಗಿದ್ದರು ಮೂರನೇ ಅಂಪೈರ್ ನೀಡಿದ ತಪ್ಪು ತೀರ್ಪಿನಿಂದಾಗಿ ಹನುಮ ವಿಹಾರಿ ಪೆವಿಲಿಯನ್ ಸೇರಬೇಕಾಯಿತು. 43 ರನ್ ಗಳಿಸಿದ್ದಾಗ ಹನುಮ ವಿಹಾರಿ ನಾಥನ್ ಲ್ಯಾನ್ ಬೌಲಿಂಗ್ ನಲ್ಲಿ ಚೆಂಡನ್ನು ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಗೆ ತಾಗದೆ ಗಾಳಿಯಲ್ಲಿ ತೇಲಿ ಬಂದು ಅಲ್ಲೆ ಇದ್ದ ಲಬುಸ್ಟಗನ್ ಕೈ ಸೇರಿತ್ತು. 
ಈ ವೇಳೆ ಆಸ್ಟ್ರೇಲಿಯಾ ಆಟಗಾರರು ಕೂಡಲೇ ಮೈದಾನದ ಅಂಪೈರ್ ಗೆ ಮನವಿ ಮಾಡಿದ್ದು ಔಟ್ ತೀರ್ಪು ನೀಡಿದ್ದರು. ಈ ವೇಳೆ ವಿಹಾರಿ ಡಿಆರ್ಎಸ್ ಗೆ ಮನವಿ ಮಾಡಿದರು. ನಂತರ ದೃಶ್ಯಗಳನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಸಹ ನಾಟೌಟ್ ಆಗಿದ್ದರು ಔಟ್ ತೀರ್ಪು ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com