4ನೇ ಟೆಸ್ಟ್: ಭಾರತದ ಬೃಹತ್ ಮೊತ್ತಕ್ಕೆ ಆಸಿಸ್ ದಿಟ್ಟ ಉತ್ತರ, 128-2

ಸಿಡ್ನಿ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತಕ್ಕೆ ಆತಿಥೇಯ ಆಸ್ಟ್ರೇಲಿಯಾ ದಿಟ್ಟ ಉತ್ತರ ನೀಡುತ್ತಿದ್ದು, ಆಸಿಸ್ ತಂಡ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ.
ಮಾರ್ಕಸ್ ಹ್ಯಾರಿಸ್ ಬ್ಯಾಟಿಂಗ್ ವೈಖರಿ
ಮಾರ್ಕಸ್ ಹ್ಯಾರಿಸ್ ಬ್ಯಾಟಿಂಗ್ ವೈಖರಿ
ಸಿಡ್ನಿ: ಸಿಡ್ನಿ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತಕ್ಕೆ ಆತಿಥೇಯ ಆಸ್ಟ್ರೇಲಿಯಾ ದಿಟ್ಟ ಉತ್ತರ ನೀಡುತ್ತಿದ್ದು, ಆಸಿಸ್ ತಂಡ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ.
ನಿನ್ನೆ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 24 ರನ್ ಗಳಿಸಿದ್ದ ಕಾಂಗರೂಗಳು ಇಂದೂ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪ್ರಮುಖವಾಗಿ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಸಮಯೋಚಿತ ಆಟ ಪ್ರದರ್ಶನ ಮಾಡಿ ಅರ್ಧಶತಕ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಉಸ್ಮಾನ್ ಖವಾಜ 27 ರನ್ ಗಳಿಸಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಮಾರ್ನಸ್ ಲ್ಯಾಬಸ್ಚ್ಯಾಗ್ನೆ ಜೊತೆಗೂಡಿದ ಹ್ಯಾರಿಸ್ ತಮ್ಮ ಆಟ ಮುಂದುವರೆಸಿ ಅಧಶತಕ ಪೂರೈಸಿದರು. 
ಬಳಿಕ 79 ರನ್ ಗಳಿಸಿದ್ದ ವೇಳೆ ಮಾರ್ಕಸ್ ಹ್ಯಾರಿಸ್ ರನ್ನು ಕ್ಲೀನ್ ಬೌಲ್ಡ್ ಮಾಡುಲ ಮೂಲಕ ಭಾರತದ ರವೀಂದ್ರ ಜಡೇಜಾ ಪೆವಿಲಿಯನ್ ಗೆ ಅಟ್ಟಿದರು. ಇದೀಗ ಶಾಮ್ ಮಾರ್ಶ್ ಕ್ರೀಸ್ ಗೆ ಆಗಮಿಸಿದ್ದು, ಮಾರ್ನಸ್ ಲ್ಯಾಬಸ್ಚ್ಯಾಗ್ನೆ ಜೊತೆಗೂಡ ಇನ್ನಿಂಗ್ಸ್ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಆಸಿಸ್ 2 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ.
22 ರನ್ ಗಳಿಸಿರುವ ಮಾರ್ನಸ್ ಲ್ಯಾಬಸ್ಚ್ಯಾಗ್ನೆ ಮತ್ತು 4 ರನ್ ಗಳಿಸಿರುವ ಶಾನ್ ಮಾರ್ಶ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಗೆ ತಲಾ 1 ವಿಕೆಟ್ ಪಡೆದಿದ್ದಾರೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಈಗಾಗಲೇ 2-1ರಲ್ಲಿ ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲಿ ಆಸಿಸ್ ಡ್ರಾ ಸಾಧಿಸಿದರೂ ಸರಣಿ ಟೀಂ ಇಂಡಿಯಾ ಕೈವಶವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com