ಕ್ಯಾನ್ಸರ್ ವಿರುದ್ದದ ಅಭಿಯಾನಕ್ಕೆ ಪರಸ್ಪರ ಕೈ ಜೋಡಿಸಿದ ಆಸ್ಚ್ರೇಲಿಯಾ, ಭಾರತ ತಂಡ

ಮಾರಕ ಕ್ಯಾನ್ಸರ್ ವಿರುದ್ಧ ಅಭಿಯಾನ ಕೈಗೊಂಡಿರುವ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಗ್ಲೇನ್ ಮೆಕ್ ಗ್ರಾಥ್ ಅವರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಕೈ ಜೋಡಿಸಿದ ಘಟನೆ ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆದಿದೆ.
ಸಿಡ್ನಿಯಲ್ಲಿ ಮೆಕ್ ಗ್ರಾಥ್ ಡೇ ಆಚರಣೆ
ಸಿಡ್ನಿಯಲ್ಲಿ ಮೆಕ್ ಗ್ರಾಥ್ ಡೇ ಆಚರಣೆ
ಸಿಡ್ನಿ: ಮಾರಕ ಕ್ಯಾನ್ಸರ್ ವಿರುದ್ಧ ಅಭಿಯಾನ ಕೈಗೊಂಡಿರುವ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಗ್ಲೇನ್ ಮೆಕ್ ಗ್ರಾಥ್ ಅವರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಕೈ ಜೋಡಿಸಿದ ಘಟನೆ ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆದಿದೆ.
ಹೌದು.. ಸ್ತನ ಕ್ಯಾನ್ಸರ್ ವಿರುದ್ಧ ಕಳೆದ 10 ವರ್ಷಗಳಿಂದ ಆಸಿಸ್ ಮಾಜಿ ವೇಗಿ ಗ್ರೇನ್ ಮೆಕ್ ಗ್ರಾಥ್ ನಡೆಸುತ್ತಿರುವ ವಿಶೇಷ ಅಭಿಯಾನಕ್ಕೆ ಕೊಹ್ಲಿ ಪಡೆ ಮತ್ತು ಟಿಮ್ ಪೈನ್ ಪಡೆ ಪರಸ್ಪರ ಕೈ ಜೋಡಿಸಿದ್ದು, ಎಲ್ಲ ಆಟಗಾರರೂ ತಮ್ಮ ತಮ್ಮ ಹಸ್ತಾಕ್ಷರ ವಿರುವ ಪಿಂಕ್ ಕ್ಯಾಪ್ ಗಳನ್ನು ಸಂಗ್ರಹಿಸಿ ನೀಡಿದ್ದಾರೆ.
2008ರಲ್ಲಿ ಮೆಕ್ ಗ್ರಾಥ್ ಅವರ ಪತ್ನಿ ಜೇನ್ ಮೆಕ್ ಗ್ರಾಥ್ ಸ್ತನ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಅಂದಿನಿಂದ ಈ ಸ್ತನ ಕ್ಯಾನ್ಸರ್ ಕುರಿತು ಮೆಕ್ ಗ್ರಾಥ್ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಾಗಿ ಮೆಕ್ ಗ್ರಾಥ್ ಫೌಂಡೇಷನ್ ಕೂಡ ಸ್ಥಾಪನೆ ಮಾಡಲಾಗಿದ್ದು, ಈ ಫೌಂಡೇಷನ್ ಅಡಿಯಲ್ಲಿ ಪ್ರತೀ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೆಕ್ ಗ್ರಾಥ್ ಡೇ ಆಚರಿಸಲಾಗುತ್ತದೆ. ಈ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಚ್ ಎಂದು ಘೋಷಣೆ ಮಾಡಲಾಗಿದೆ.
ಈ ವೇಳೆ ಕ್ರಿಕೆಟ್ ಆಟಗಾರರಿಂದ ಸಹಿ ಮಾಡಿದ ಪಿಂಕ್ ಕ್ಯಾಪ್ ಗಳು, ಟೀ ಶರ್ಟ್ ಗಳು, ಗ್ಲೌಸ್ ಗಳು ಇನ್ನಿತರೆ ಕ್ರೀಡಾ ಪರಿಕರಗಳನ್ನುಸಂಗ್ರಹಿಸಿ ಅವುಗಳನ್ನು ಹರಾಜು ಹಾಕಿ ಹಣ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಣದಿಂದ ಬಡ ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡಲಾಗುತ್ತದೆ. 
ಕಳೆದ 10 ವರ್ಷದಿಂದಲೂ ಮೆಕ್ ಗ್ರಾಥ್ ಫೌಂಡೇಷನ್ ಇಂತಹುದೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಇದಕ್ಕೆ ಕ್ರಿಕೆಟ್ ಆಸ್ಟ್ಕೇಲಿಯಾ ಕೂಡ ಸಾಥ್ ನೀಡಿರುವುದು ವಿಶೇಷ. ಇದೀಕ ಇಂತಹುದೊಂದು ಉತ್ತಮ ಕಾರ್ಯಕ್ಕೆ ಟೀಂ ಇಂಡಿಯಾ ಆಟಗಾರರೂ ಕೂಡ ಕೈ ಜೋಡಿಸಿದ್ಜಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com