ಪೃಥ್ವಿ ಶಾ- ಮಯಾಂಕ್ ಆರಂಭಿಕರಾಗಿ ಕ್ಲಿಕ್ ಆದರೆ ತಂಡದ ಸಮಸ್ಯೆಗೆ ಪರಿಹಾರ: ಗೌತಮ್ ಗಂಭೀರ್

ಟೀಂ ಇಂಡಿಯಾದ ಉದಯೋನ್ಮುಖ ಆಟಗಾರಾರದ ಪೃಥ್ವಿ ಶಾ ಹಾಗೂ ಕನ್ನಡಿಗ ಮಯಾಂಕ್​ ಅಗರವಾಲ್​ ಆರಂಭಿಕರಾಗಿ ಕ್ಲಿಕ್ ಆದರೆ ತಂಡ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಟೀಂ ಇಂಡಿಯಾದ ಉದಯೋನ್ಮುಖ ಆಟಗಾರಾರದ ಪೃಥ್ವಿ ಶಾ ಹಾಗೂ ಕನ್ನಡಿಗ ಮಯಾಂಕ್​ ಅಗರವಾಲ್​ ಆರಂಭಿಕರಾಗಿ ಕ್ಲಿಕ್ ಆದರೆ ತಂಡ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೌತಮ್ ಗಂಭೀರ್, ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿಶಾ ತಂಡದ ಪರ ಮೈದಾನಕ್ಕಿಳಿದು ತಮ್ಮ ಸಾಮರ್ಥ್ಯ ಏನು ಎಂಬುದನ್ನ ಈಗಾಗಲೇ ತೋರಿಸಿದ್ದಾರೆ. ಮಯಾಂಕ್​ - ಪೃಥ್ವಿ ಟೀಂ ಇಂಡಿಯಾದ ಬಹುಕಾಲದ ಆರಂಭಿಕ ಜೋಡಿಗಳಾಗಿ ಉಳಿಯಬಹುದು. ಈಗಾಗಲೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕೆ.ಎಲ್.​ ರಾಹುಲ್​​, ಮುರುಳಿ ವಿಜಯ್​, ಶಿಖರ್​ ಧವನ್​, ಹನುಮ ವಿಹಾರಿಗೆ ಚಾನ್ಸ್​ ನೀಡಿ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗಿದೆ.  ಆದರೆ,  ಇವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿಲ್ಲ. ಹೀಗಾಗಿ ಮಯಾಂಕ್ ಮತ್ತು ಪೃಥ್ವಿ ಶಾ ಅವರಿಗೂ ಒಂದು ಚಾನ್ಸ್ ನೀಡಬೇಕು ಎಂದು ಹೇಳಿದ್ದಾರೆ.
ಇಂಗ್ಲೆಂಡ್​​ನಲ್ಲಿ ಪೃಥ್ವಿ ಶಾ ಹಾಗೂ ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಮಯಾಂಕ್​ ಅಗರವಾಲ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದು, ಟೀಂ ಇಂಡಿಯಾ ತಂಡಕ್ಕೆ ಕಾಡುತ್ತಿದ್ದ ಆರಂಭಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮಯಾಂಕ್​ ಅಗರವಾಲ್​ ಅದ್ಭುತ ಪ್ರದರ್ಶನ ನೀಡಿದ್ದು, ಇದು ಅವರಲ್ಲಿರುವ ಪ್ರತಿಭೆಯನ್ನ ತೋರಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ​ಮನ್​ಗಳು ಉತ್ತಮ ರನ್​ ಗಳಿಕೆ ಮಾಡಿಕೊಂಡಿದ್ದಾರೆ. ಆದರೆ ಆರಂಭಿಕರು ಮಾತ್ರ ವೈಫಲ್ಯ ಅನುಭವಿಸಿದ್ದಾರೆ.   ಈ ನಡುವೆಯೂ ಕೂಡಾ ಮಯಾಂಕ್​ ಅದ್ಭುತ ಪ್ರದರ್ಶನ ತೋರಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ. 
ಅಂತೆಯೇ ನಾನು ಮುಂಬರುವ ವಿಶ್ವಕಪ್​ ಟೂರ್ನಿ ಗಮನದಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ. ಅದು ಆರಂಭಗೊಳ್ಳಲು ಸಮಯವಕಾಶವಿದ್ದು, ಆ ವೇಳೆಗೆ ಟೀಂ ಇಂಡಿಯಾ ತಂಡಕ್ಕೆ ಕೆಲ ಯುವ ಪ್ರತಿಭೆಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com