ಭಾರತದ ವಿರುದ್ಧದ ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿ!

ಟೀಂ ಇಂಡಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ 14 ಮಂದಿ ಆಟಗಾರರ ತಂಡ ಪ್ರಕಟಿಸಿದ್ದು, ಈ ಆಯ್ಕೆಗೆ ಆಸಿಸ್ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿಕಾರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಟೀಂ ಇಂಡಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ 14 ಮಂದಿ ಆಟಗಾರರ ತಂಡ ಪ್ರಕಟಿಸಿದ್ದು, ಈ ಆಯ್ಕೆಗೆ ಆಸಿಸ್ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿಕಾರಿದ್ದಾರೆ.
ಇದೇ ಜನವರಿ 8 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ಆಯ್ಕೆ ಮಾಡಿರುವ ತಂಡ ಹಾಸ್ಯಾಸ್ಪದವಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಲೆಗ್​ ಸ್ಪಿನ್​ ಲೆಜೆಂಡ್​ ಶೇನ್​ ವಾರ್ನ್​ ಹೇಳಿದ್ದಾರೆ. 14 ಸದಸ್ಯರ ಪರಿಸ್ಕೃತ ತಂಡ ಪ್ರಕಟಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​,  ಪೀಟರ್ ಸಿಡ್ಲೇ, ಉಸ್ಮಾನ್​ ಖ್ವಾಜಾ ಮತ್ತು ನೇಥನ್​ ಲಿಯಾನ್​ ಗೆ ಚಾನ್ಸ್​​ ನೀಡಿತ್ತು. ಈ ಬಗ್ಗೆ ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಶೇನ್​ ವಾರ್ನ್​, ಕ್ರಿಕೆಟ್​ ಆಸ್ಟ್ರೇಲಿಯಾ ಸೆಲೆಕ್ಷನ್​ ಕಂಡು ಚಕಿತನಾದೆ.  ಈ ಆಯ್ಕೆಯಲ್ಲಿ ಯಾವುದೇ ಅರ್ಥವಿಲ್ಲ.  ಇದೊಂದು ಹಾಸ್ಯಾಸ್ಪದ ಆಯ್ಕೆ ಎಂದು ಟೀಕಿಸಿದ್ದಾರೆ. 
ಇದೇ ವೇಳೆ ವಾರ್ನ್​ 11 ಜನರ ತಂಡ ಹೀಗಿರಬೇಕು. ಇದಾಗಿದ್ದರೆ ಚೆನ್ನ ಎಂದು ಲಿಸ್ಟ್​ ಅನ್ನು ಟ್ವಿಟ್ಟರ್​ನಲ್ಲಿ ಹಾಕಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com