ಮೆಲ್ಬೋರ್ನ್ ಕ್ರೀಡಾಂಗಣವನ್ನೂ ಮೀರಿಸುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಭಾರತದಲ್ಲಿ!

ಇಡೀ ವಿಶ್ವದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿ ಪಡೆದಿರುವ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನೂ ಮೀರಿಸುವ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಭಾರತದಲ್ಲಿ ನಿರ್ಮಾಣವಾಗುತ್ತಿದೆ.
ಗುಜರಾತ್ ನ ಮೊಟೆರಾದಲ್ಲಿ ನಿರ್ಮಾಣವಾಗುತ್ತಿರುವ ಅತೀ ದೊಡ್ಡ ಸ್ಟೇಡಿಯಂ
ಗುಜರಾತ್ ನ ಮೊಟೆರಾದಲ್ಲಿ ನಿರ್ಮಾಣವಾಗುತ್ತಿರುವ ಅತೀ ದೊಡ್ಡ ಸ್ಟೇಡಿಯಂ
ಅಹ್ಮದಾಬಾದ್: ಇಡೀ ವಿಶ್ವದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿ ಪಡೆದಿರುವ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನೂ ಮೀರಿಸುವ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಭಾರತದಲ್ಲಿ ನಿರ್ಮಾಣವಾಗುತ್ತಿದೆ.
ಹೌದು... ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಖ್ಯಾತಿ ಪಡೆದಿದೆ. ಆದರೆ ಅದನ್ನೂ ಮೀರಿಸುವಂತಹ ಅದ್ದಕಿಂತಲೂ ದೊಡ್ಡದಾದ ಮತ್ತೊಂದು ಸ್ಟೇಡಿಯಂ ಸದ್ದಿಲ್ಲದೇ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಅಂತೆಯೇ ಸದ್ಯದಲ್ಲಿಯೇ ಆ ಸ್ಟೇಡಿಯಂ ಲೋಕಾರ್ಪಣೆ ಕೂಡ ಆಗಲಿದೆ. 
ಜಗತ್ತಿನಲ್ಲಿ ಅತಿ ಎತ್ತರದ ಏಕತಾ ಪ್ರತಿಮೆ ತಲೆ ಎತ್ತಿರುವ ಗುಜರಾತ್ ನಲ್ಲಿ ಈ ಬೃಹತ್ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಅಹ್ಮದಾಬಾದ್ ನಗರದಲ್ಲಿನ ಮೊಟೆರಾದಲ್ಲಿ ಈ ಹೊಸ ಕ್ರೀಡಾಂಗಣ ಸಿದ್ಧವಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಗುಜರಾತ್ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಪರಿಮಾಲ್ ನತ್ವಾನಿ ಅವರು, ಹೊಸ ಸ್ಟೇಡಿಯಂನ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ನಿರ್ಮಾಣ ಹಂತದಲ್ಲಿರುವ ಸ್ಟೇಡಿಯಂನ ಕೆಲವು ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 
ಮೂಲಗಳ ಪ್ರಕಾರ ಸುಮಾರು 63 ಎಕರೆ ಜಾಗದಲ್ಲಿ ಈ ಸ್ಟೇಡಿಯಂ ನಿರ್ಮಾಣವಾಗುತ್ತಿದ್ದು, ಇದರ ನಿರ್ಮಾಣ ವೆಚ್ಚವನ್ನು ಸುಮಾರು 700 ಕೋಟಿ ಎಂದು ಅಂದಾಜಿಸಲಾಗಿದೆ. ಈ ಸ್ಟೇಡಿಯಂನಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಕೂರಬಹುದಾಗಿದೆ. ಇನ್ನು ಕ್ರಿಕೆಟ್ ನೋಡಲು ಆಗಮಿಸುವ ಪ್ರೇಕ್ಷಕರಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗ್ತಿದೆ. ಸುಮಾರು 3 ಸಾವಿರ ಕಾರ್ ಗಳು ಹಾಗೂ 10 ಸಾವಿರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವಷ್ಟು ದೊಡ್ಡದಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 
2017ರಿಂದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಶೀಘ್ರ ಈ ಮೈದಾನ ಲೋಕಾರ್ಪಣೆಯಾಗಲಿದೆ. ವಿಶೇಷ ಅಂದರೆ 1.10 ಲಕ್ಷ ಅಭಿಮಾನಿಗಳು ಕುಳಿತ ಪಂದ್ಯವನ್ನ ವೀಕ್ಷಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com