ಟೀಂ ಇಂಡಿಯಾ ಐತಿಹಾಸಿಕ ಗೆಲುವಿನ ಕುರಿತು ಕುಂಬ್ಳೆ ಭವಿಷ್ಯ, ವಿಡಿಯೋ ವೈರಲ್!

ಏಳು ದಶಕಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಆದರೆ ತಂಡದ ಗೆಲುವಿನ ಕುರಿತು ಮಾಜಿ ನಾಯಕ ಅನಿಲ್ ಕುಂಬ್ಳೆ ಮೊದಲೇ ಭವಿಷ್ಯ ನುಡಿದಿದ್ದರು. ಈ ಕುರಿತ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Published: 09th January 2019 12:00 PM  |   Last Updated: 09th January 2019 04:49 AM   |  A+A-


former Team india Skipper Anil Kumble got India-Australia Test series result eerily spot on

ಅನಿಲ್ ಕುಂಬ್ಳೆ ಸಂದರ್ಶನ

Posted By : SVN SVN
Source : Online Desk
ನವದೆಹಲಿ: ಏಳು ದಶಕಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಆದರೆ ತಂಡದ ಗೆಲುವಿನ ಕುರಿತು ಮಾಜಿ ನಾಯಕ ಅನಿಲ್ ಕುಂಬ್ಳೆ ಮೊದಲೇ ಭವಿಷ್ಯ ನುಡಿದಿದ್ದರು. ಈ ಕುರಿತ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​​-ಗವಾಸ್ಕರ್​ ಟ್ರೋಫಿಯ ನಾಲ್ಕು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2-1 ಅಂತರದ ಐತಿಹಾಸಿಕ ಗೆಲುವು ದಾಖಲು ಮಾಡಿ ಹೊಸ ಇತಿಹಾಸ ಬರೆದಿದೆ. ಆದರೆ ಟೆಸ್ಟ್​ ಸರಣಿ ಆರಂಭಗೊಳ್ಳುವುದಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ ನುಡಿದಿದ್ದ ರೀತಿಯಲ್ಲೇ ಕಾಂಗರೂ ನೆಲದಲ್ಲಿ ಗೆಲುವು ದಾಖಲು ಮಾಡಿರುವುದು ಮಾತ್ರ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಅಂದರೆ ನವೆಂಬರ್​ 26ರಂದು ಕ್ರಿಕೆಟ್ ನೆಕ್ಸ್ಟ್ ಗಾಗಿ ನಡೆಸಲಾಗಿದ್ದ ಸಂದರ್ಶನವೊಂದರಲ್ಲಿ ಕುಂಬ್ಳೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ 2-1 ಅಂತರದ ಗೆಲುವು ದಾಖಲು ಮಾಡಿಲಿದೆ ಎಂದಿದ್ದರು. ಜತೆಗೆ ಟೆಸ್ಟ್​ ಸರಣಿ ವೇಳೆ ಮಳೆಯ ಆರ್ಭಟ ಜೋರಾದ್ರೆ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. 

ಅದೇ ರೀತಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದು, 2ನೇ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ತನ್ನ ಪರಾಕ್ರಮ ಮೆರೆದಿದ್ದ ಭಾರತಕ್ಕೆ ಕೊನೆ ಟೆಸ್ಟ್​ ಪಂದ್ಯದಲ್ಲಿ ಮಳೆಯ ಅವಕೃಪೆ ಉಂಟಾಯಿತು. ಇದರ ಮಧ್ಯೆ ಕೊಹ್ಲಿ ಪಡೆ 2-1 ಅಂತರದಲ್ಲಿ ಐತಿಹಾಸಿಕ ಗೆಲುವು ದಾಖಲು ಮಾಡಿತ್ತು.  ಇದೀಗ ಅನಿಲ್ ಕುಂಬ್ಳೆ ಅವರ ಈ ಸಂದರ್ಶನದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp