ಬೇಬಿ ಸಿಟ್ಟರ್ ಗೆ ಫುಲ್ ಡಿಮ್ಯಾಂಡ್: ರೋಹಿತ್ ಬಳಿಕ ತಮಗೂ ರಿಷಬ್ ಪಂತ್ ಬೇಕು ಎಂದ ಆಸಿಸ್ ನಾಯಕನ ಪತ್ನಿ!

ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾದ ಟೆಸ್ಟ್ ತಂಡ ನಾಯಕ ಟಿಮ್ ಪೈನ್ ಅದ್ಯಾವ ಸಂದರ್ಭದಲ್ಲಿ ಬೇಬಿ ಸಿಟ್ಟರ್ ಎಂದು ಕರೆದರೋ ಏನೋ.. ಅದಿನಿಂದಲೇ ರಿಷಬ್ ಪಂತ್ ಅದೃಷ್ಟ ಖುಲಾಯಿಸಿದೆ.

Published: 10th January 2019 12:00 PM  |   Last Updated: 10th January 2019 02:08 AM   |  A+A-


Ausis Skipper Tim Paine's wife asks for Rishabh Pant's availability to babysit her kids

ಬೋನಿ ಪೈನ್ ಮತ್ತು ರಿಷಬ್ ಪಂತ್

Posted By : SVN SVN
Source : Online Desk
ಸಿಡ್ನಿ: ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾದ ಟೆಸ್ಟ್ ತಂಡ ನಾಯಕ ಟಿಮ್ ಪೈನ್ ಅದ್ಯಾವ ಸಂದರ್ಭದಲ್ಲಿ ಬೇಬಿ ಸಿಟ್ಟರ್ ಎಂದು ಕರೆದರೋ ಏನೋ.. ಅದಿನಿಂದಲೇ ರಿಷಬ್ ಪಂತ್ ಅದೃಷ್ಟ ಖುಲಾಯಿಸಿದೆ.

ಆಸಿಸ್ ಪ್ರವಾಸದಲ್ಲಿ ತಾತ್ಕಾಲಿಕ ಕ್ಯಾಪ್ಟನ್ ಎಂದು ಟಿಮ್ ಪೈನ್ ಕಾಲೆಳೆದಿದ್ದ ಪಂತ್ ಬಳಿಕ ಅವರ ಮನೆಗೇ ತೆರಳಿ ಅವರ ಪತ್ನಿಯನ್ನು ಭೇಟಿ ಮಾಡಿ ಮಕ್ಕಳನ್ನು ಎತ್ತಿಕೊಂಡು ಟಿಮ್ ಪೈನ್ ಬೇಬಿ ಸಿಟ್ಟರ್ ಹೇಳಿಕೆಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದರು. ಈ ಘಟನೆ ಬಳಿಕ ರಿಷಬ್ ಪಂತ್ ಬೇಬಿ ಸಿಟ್ಟರ್ ಖ್ಯಾತಿ ಎಲ್ಲೆಡೆ ಚರ್ಚೆಯಾಗಿತ್ತು. ಇದಕ್ಕೆ ಇಂಬು ನೀಡುವಂತೆ ಭಾರತ ತಂಡದ ರೋಹಿತ್ ಶರ್ಮಾ ಕೂಡ ತಮಗೆ ಮಗುವಾಗಿದ್ದು ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಅವಶ್ಯಕತೆ ಇದೆ ಎಂದು ಪಂತ್ ಕಾಲೆಳೆಯುವ ಪ್ರಯತ್ನ ಮಾಡಿದ್ದರು. 


ಇದ್ದಕೆ ಉತ್ತರ ನೀಡಿದ್ದ ಪಂತ್, ಬಹುಶಃ ಚಾಹಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೆನಿಸುತ್ತದೆ. ನಾನು ರೆಡಿ ಎಂದು ಅವರದೇ ದಾಟಿಯಲ್ಲಿ ಉತ್ತರ ನೀಡಿದ್ದರು. ಇದೀಗ ಈ ಪಟ್ಟಿಗೆ ಆಸಿಸ್ ನಾಯಕ ಟಿಮ್ ಪೈನ್ ಪತ್ನಿ ಬೋನಿ ಪೈನ್ ಕೂಡ ಸೇರಿಕೊಂಡಿದ್ದು, ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.

ತಮ್ಮ ಮಗುವನ್ನು ಎತ್ತಿಕೊಂಡಿರುವ ಬೋನಿ ಪೈನ್, ಮಗುವಿನ ಆರೈಕೆಗಾಗಿ ಪ್ರಯತ್ನಿಸುತ್ತಿದ್ದೇನೆ, ರಿಷಬ್ ಪಂತ್ ಸಿಕ್ಕರೆ ಒಳ್ಳೆಯದು ಎಂದು ಪೋಟೋ ಮೇಲೆ ಬರಿದಿದ್ದಾರೆ. ಆ ಮೂಲಕ ತಮ್ಮ ಮಗುವಿನ ಆರೈಕೆಗಾಗಿ ಪಂತ್ ಬೇಕು ಎಂದು ಬೋನಿ ಪೈನ್ ಹೇಳಿದ್ದಾರೆ. ಇನ್ನು ಬೋನಿ ಪೈನ್ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp