ಈ ಗೋಡೆಗೆ ಕಿವಿ ಜೊತೆಗೆ ದೊಡ್ಡ ಮನಸ್ಸೂ ಇದೆ: ಪ್ರೀತಿಯ 'ಜಾಮಿ'ಗೆ ಜನ್ಮದಿನ ಶುಭಾಶಯ ಕೋರಿದ ಸೆಹ್ವಾಗ್

ಗೋಡೆಗಳಿಗೂ ಕಿವಿ ಇರುತ್ತದೆ ಎಂದು ಕೇಳಿದ್ದೇನೆ.. ಆದರೆ ಈ ವಿಶೇಷ ಗೋಡೆಗೆ ಕಿವಿ ಜೊತೆಗೆ ಗೋಡೆಯಷ್ಟೇ ದೊಡ್ಡದಾದ ಮನಸ್ಸು ಕೂಡ ಇದೆ ಎಂದು ಹೇಳುವ ಮೂಲಕ ಭಾರತೀಯ ಕ್ರಿಕೆಟ್ ತಂಡ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಗೋಡೆಗಳಿಗೂ ಕಿವಿ ಇರುತ್ತದೆ ಎಂದು ಕೇಳಿದ್ದೇನೆ.. ಆದರೆ ಈ ವಿಶೇಷ ಗೋಡೆಗೆ ಕಿವಿ ಜೊತೆಗೆ ಗೋಡೆಯಷ್ಟೇ ದೊಡ್ಡದಾದ ಮನಸ್ಸು ಕೂಡ ಇದೆ ಎಂದು ಹೇಳುವ ಮೂಲಕ ಭಾರತೀಯ ಕ್ರಿಕೆಟ್ ತಂಡ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ.
‘ದಿ ವಾಲ್’​ ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಇಂದು 47 ಜನ್ಮ ದಿನದ ಸಂಭ್ರಮವಾಗಿದ್ದು ಈ ನಿಟ್ಟಿನಲ್ಲಿ ವಿಶೇಷ ಟ್ವೀಟ್ ಮಾಡಿರುವ ಸೆಹ್ವಾಗ್, ಗೋಡೆಗಳಿಗೂ ಕಿವಿ ಇರುತ್ತದೆ ಎಂದು ಕೇಳಿದ್ದೇನೆ.. ಆದರೆ ಈ ವಿಶೇಷ ಗೋಡೆಗೆ ಕಿವಿ ಜೊತೆಗೆ ಗೋಡೆಯಷ್ಟೇ ದೊಡ್ಡದಾದ ಮನಸ್ಸು ಕೂಡ ಇದೆ. ಅವರೊಂದಿಗೆ ಕ್ರೀಸ್ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ದೊಡ್ಡ ಗೌರವ... ಅವರೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣೀಯ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಇನ್ನು ಜನವರಿ 11 1973ರಲ್ಲಿ ಜನಿಸಿದ್ದರು. 1996ರ ಏಫ್ರಿಲ್​​ 3ರಂದು ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದ ದ್ರಾವಿಡ್​, ಅದೇ ವರ್ಷ ಜೂನ್​ 20 ರಂದು ಆರಂಭವಾದ ಇಂಗ್ಲೆಂಡ್​ ವಿರುದ್ಧದ ಲಾರ್ಡ್ಸ್​​ ಟೆಸ್ಟ್​ನಲ್ಲಿ ಭಾಗವಹಿಸುವ ಮೂಲಕ ಟೆಸ್ಟ್​ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೇ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ 95 ರನ್​ ಗಳಿಸಿ ಗಮನ ಸೇಳೆದಿದ್ದರು. ಮುಂದೆ ಸುಮಾರು ಒಂದುವರೆ ದಶಕಗಳ ಕಾಲ ಭಾರತ ಕ್ರಿಕೆಟ್​ ತಂಡದ ಬ್ಯಾಟಿಂಗ್​ ಬೆನ್ನೆಲುಬಾಗಿದ್ದ ದ್ರಾವಿಡ್​, ದಿ ವಾಲ್​ ಎಂದೇ ಫೇಮಸ್​ ಆದರು.
ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಕ್ರಮವಾಗಿ 13,288 ಮತ್ತು 10,889 ರನ್​ ಗಳಿಸಿದ ದ್ರಾವಿಡ್​, ಕ್ರಿಕೆಟ್ ನ ಎರಡೂ ಮಾದರಿಯಲ್ಲಿ 10 ಸಾವಿರಕ್ಕೂ ಅಧಿಕ ರನ್​ ಕಲೆಹಾಕಿದ ಕೆಲವೇ ಕೆಲವು ಬ್ಯಾಟ್ಸಮನ್ ಗಳಲ್ಲಿ ದ್ರಾವಿಡ್ ಒಬ್ಬರಾಗಿದ್ದಾರೆ. ಅಂತೆಯೇ ಸುದೀರ್ಘ ಕಾಲ ಟೆಸ್ಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ದಾಖಲೆ ಕೂಡ ದ್ರಾವಿಡ್ ಹೆಸರಿನಲ್ಲಿದೆ.
2012 ರಲ್ಲಿ ದ್ರಾವಿಡ್​ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್​ನಲ್ಲಿ ಅಂತಿಮ ಟೆಸ್ಟ್​ ಪಂದ್ಯವನ್ನಾಡಿದ್ದರು. ಸದ್ಯ ಕಿರಿಯ ತಂಡದ ಕೋಚ್​ ಆಗಿರುವ ದ್ರಾವಿಡ್​, 2018ರ ಅಂಡರ್​-19 ವಿಶ್ವಕಪ್​ ಗೆಲ್ಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸುಮಾರು ಒಂದುವರೆ ದಶಕಗಳ ಕಾಲ ಕ್ರಿಕೆಟ್​ ಅಂಗಳದಲ್ಲಿ ಮಿಂಚಿದ್ದ ದ್ರಾವಿಡ್​, 46 ವಸಂತಗಳನ್ನ ಪೂರೈಸಿದ್ದಾರೆ. ಸದ್ಯ ಭಾರತ ಅಂಡರ್​​-19 ಮತ್ತು ‘ಎ’ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ, ಭವಿಷ್ಯದ ಟೀಮ್​ ಇಂಡಿಯಾ ಕಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com